ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 
ದೇಶ

ಕಾಶ್ಮೀರಿಗಳ ಕೈಯಲ್ಲಿ ಲ್ಯಾಪ್'ಟಾಪ್ ನೋಡಲು ಇಚ್ಛಿಸುತ್ತೇವೆ, ಶಸ್ತ್ರಾಸ್ತ್ರಗಳನ್ನಲ್ಲ: ರಾಜನಾಥ್ ಸಿಂಗ್

ಕಾಶ್ಮೀರದಲ್ಲಿರುವ ಯುವಕರ ಕೈಯಲ್ಲಿ ಪೆನ್ನು ಹಾಗೂ ಲ್ಯಾಪ್'ಟಾಪ್ ಗಳನ್ನು ನೋಡಲು ಇಚ್ಛಿಸುತ್ತೇವೆಯೇ ವಿನಃ ಶಸ್ತ್ರಾಸ್ತ್ರಗಳನ್ನಲ್ಲ ಎಂದು ಕೇಂದ್ರ ಗೃಹ ಸಚಿವ...

ನವದೆಹಲಿ: ಕಾಶ್ಮೀರದಲ್ಲಿರುವ ಯುವಕರ ಕೈಯಲ್ಲಿ ಪೆನ್ನು ಹಾಗೂ ಲ್ಯಾಪ್'ಟಾಪ್ ಗಳನ್ನು ನೋಡಲು ಇಚ್ಛಿಸುತ್ತೇವೆಯೇ ವಿನಃ ಶಸ್ತ್ರಾಸ್ತ್ರಗಳನ್ನಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

ಕಾಶ್ಮೀರ ಹಿಂಸಾಚಾರ ಕುರಿತಂತೆ ಉತ್ತರಪ್ರದೇಶದ ಶಾಹ್ಜಾನ್ಪುರದಲ್ಲಿ ಮಾತನಾಡಿರುವ, ನೆರೆರಾಷ್ಟ್ರವು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಸುಧೀರ್ಘವಾಗಿ ಪ್ರಯತ್ನವನ್ನು ನಡೆಸುತ್ತಲೇ ಬಂದಿದೆ. ಕಾಶ್ಮೀರದಲ್ಲಿರುವ ಯುವಕ ಕೈಯಲ್ಲಿ ಪೆನ್ನು, ಕಂಪ್ಯೂಟರ್ ಬಳಕೆಯನ್ನು ನೋಡಲು ಭಾರತ ಇಚ್ಛಿಸುತ್ತದೆಯೇ ವಿನಃ, ಕಲ್ಲು ಮತ್ತು ಶಸ್ತ್ರಾಸ್ತ್ರಗಳನ್ನಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನವು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳುವುದಕ್ಕೆ ಹಿಂಜರಿಕೆಯಿಲ್ಲ. ಕಾಶ್ಮೀರವನ್ನು ನಾಶ ಮಾಡಲು ಹಾಗೂ ಶಾಂತಿಯನ್ನು ಕದಡಲು ಪಾಕಿಸ್ತಾನ ಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದು, ಅಲ್ಲಿನ ಯುವಕರ ಕೈಯಲ್ಲಿ ಪೆನ್ನು, ಲ್ಯಾಪ್ ಟಾಪ್ ಗಳನ್ನು ಹಿಡಿದು ಶ್ರಮಪಟ್ಟು ದುಡಿಯುವುದನ್ನು ನೋಡಲು ಭಾರತ ಇಚ್ಛಿಸುತ್ತದೆ.

ಪ್ರತಿಭಟನೆ ಹಾಗೂ ಹಿಂಸಾಚಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಮೊದಲು ಕಾಶ್ಮೀರದಲ್ಲಿ ಮೊದಲು  ಶಾಂತಿಯುವ ವಾತಾವರಣವನ್ನು ಸೃಷ್ಟಿಸಬೇಕಿದೆ. ನಂತರವಷ್ಟೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತದೆ. ಭಾರತದ ಜನರು ಕೇವಲ ಕಾಶ್ಮೀರದ ಭೂಮಿಯನ್ನಷ್ಟೇ ಪ್ರೀತಿಸುವುದಿಲ್ಲ, ಅಲ್ಲಿನ ಜನರನ್ನು ಪ್ರೀತಿಸುತ್ತಾರೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಕ್ಕೆ ನಾನು ಭೇಟಿ ನೀಡಿದ್ದೆ. ಭಯೋತ್ಪಾದಕರು ಭಯೋತ್ಪಾದಕರಷ್ಟೇ ಅದರಲ್ಲಿ ಗಂಡು, ಹೆಣ್ಣು ಎಂಬುದನ್ನು ನೋಡಬಾರದು. ಹಿಂಸಾಚಾರ ಪ್ರತಿಭಟನೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮೊದಲು ಶಾಂತಿ ಕಾಪಾಡಬೇಕಿದೆ. ನಂತರವಷ್ಟೇ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಬ್ರಿಟೀಷರ ತಂತ್ರಗಳನ್ನು ಉಪಯೋಗಿಸಿಕೊಂಡು ಕಾಶ್ಮೀರದ ವಿಚಾರದಲ್ಲಿ ಕೆಲವರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಎಂದು ಧರ್ಮ ದ್ವೇಷಗಳನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಈ ರೀತಿಯ ತಂತ್ರಗಳಿಂದ ಭಾರತದ ಜನರನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ