ಕರಾವಳಿ ರಕ್ಷಣಾ ಪಡೆ 
ದೇಶ

ಮುಂಬೈನಲ್ಲಿ ದೋಣಿ ಮುಳುಗಡೆ: 15 ಮೀನುಗಾರರ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ

ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ಮುಳುಗುತ್ತಿದ್ದ ಎರಡು ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ...

ಮುಂಬೈ: ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ಮುಳುಗುತ್ತಿದ್ದ ಎರಡು ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಕಾಪಾಡಿದ್ದಾರೆ.

ಕಳೆದ ರಾತ್ರಿ ಹಿಮಸಾಗರ್ ಮತ್ತು ಕೃಷ್ಣಸಾಗರ ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಭಾರತೀಯ ನೌಕಾದಳದ ಹಡಗು ಗಂಗಾ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆ ಹಡಗು ಅಗ್ರಿಮ್ ಜತೆ ಎ ಸೀ ಕಿಂಗ್ 42ಬಿ ಹೆಲಿಕಾಫ್ಟರ್ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು ಎಲ್ಲಾ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದೆ.

ನಿನ್ನೆ ಸಂಜೆ ಹಿಮಸಾಗರ್ ಮತ್ತು ಕೃಷ್ಣಸಾಗರ್ ದೋಣಿಯಲ್ಲಿ 15 ಮಂದಿ ಮೀನುಗಾರರು ಮೀನು ಹಿಡಿಯಲು ತೆರಳಿದ್ದು ರಾತ್ರಿಯಾದರೂ ಬಾರದೆ ಇದ್ದಿದ್ದರಿಂದ ಮೀನುಗಾರರನೊಬ್ಬ ಕರಾವಳಿ ರಕ್ಷಣಾ ಪಡೆಗೆ ವಿಷಯ ಮುಟ್ಟಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್