ಹಾರ್ದಿಕ್ ಪಟೇಲ್ 
ದೇಶ

ಕೋಟ್ಯಾಧಿಪತಿಯಾಗಲು ಮೀಸಲಾತಿ ಅಸ್ತ್ರ ಬಳಸಿಕೊಂಡ್ರಾ ಹಾರ್ದಿಕ್ ಪಟೇಲ್?

ಪಟೇಲ್ ಮೀಸಲಾತಿ ಹೋರಾಟದಿಂದ ರಾತ್ರೋರಾತ್ರಿ ಜನಪ್ರಿಯರಾದ ಹಾರ್ದಿಕ್‌ ಪಟೇಲ್‌ ಹಣ ಸಂಪಾದಿಸಲು ಪಟೇಲ್ ಹೋರಾಟದ ಮೀಸಲಾತಿ ಅಸ್ತ್ರ ...

ಅಹಮದಾಬಾದ್‌: ಪಟೇಲ್ ಮೀಸಲಾತಿ ಹೋರಾಟದಿಂದ ರಾತ್ರೋರಾತ್ರಿ ಜನಪ್ರಿಯರಾದ ಹಾರ್ದಿಕ್‌ ಪಟೇಲ್‌ ಹಣ ಸಂಪಾದಿಸಲು ಪಟೇಲ್ ಹೋರಾಟದ ಮೀಸಲಾತಿ ಅಸ್ತ್ರ ಬಳಸಿಕೊಂಡಿದ್ದಾರೆ ಎಂದು ಅವರ ಸ್ನೇಹಿತರು ಆರೋಪಿಸಿದ್ದಾರೆ.

ಈ ಹಿಂದೆ ಹಾರ್ದಿಕ್ ಪಟೇಲ್‌ ಜೊತೆಗಿದ್ದ ಅವರ ಸ್ನೇಹಿತರಾದ ಚಿರಾಗ್ ಪಟೇಲ್, ಕೇತನ್ ಪಟೇಲ್ ಅವರು ಹಾರ್ದಿಕ್ ವಿರುದ್ಧ ತೀವ್ರ ತೀವ್ರ ಆರೋಪ ಮಾಡಿದ್ದಾರೆ. ಹಾರ್ದಿಕ್ ಪಟೇಲ್ ತಮ್ಮ ಸಮುದಾಯದ ನಾಯಕನಾಗಿ ಬೆಳೆಯಲು ಹಾಗೂ ಕೋಟ್ಯಾಧಿಪತಿ ಆಗಲು ಮೀಸಲಾತಿ ಹೋರಾಟವನ್ನು ಬಳಸಿಕೊಂಡಿದ್ದಾರೆ  ಮೀಸಲಾತಿ ಹೋರಾಟ ಶುರು ಮಾಡಿದ ಒಂದು ವರ್ಷದಲ್ಲಿ ಹಾರ್ದಿಕ್‌ ಕೋಟ್ಯಾಧಿಪತಿಯಾಗಿದ್ದಾರೆ ಅವರು ದೂರಿದ್ದಾರೆ.

ಪಾಟಿದರ್ ಅನಮತ್ ಆಂದೋಲನ ಸಮಿತಿ ಸದಸ್ಯರಾದ ಚಿರಾಗ್, ಕೇತನ್ ಅವರು ಹಾರ್ದಿಕ್‌‌‌ಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.  
ನೀನು ಒಬ್ಬ ಸ್ವಾರ್ಥಿ, ನೀನು ನಾಯಕನಾಗಿ ಬೆಳೆಯುವ ಹಾಗೂ ಶ್ರೀಮಂತನಾಗುವ ಉದ್ದೇಶದಿಂದ ನಮ್ಮ ಮಹತ್ವಾಕಾಂಕ್ಷೆಯ ಪಟೇಲ್‌ ಮೀಸಲಾತಿ ಹೋರಾಟಕ್ಕೆ ಧಕ್ಕೆಯಾಗಿದೆ, ನೀನು ಮತ್ತು ನಿನ್ನ ಆಪ್ತ ಸ್ನೇಹಿತರು ಆದ್ದೂರಿ ಜೀವನ ನಡೆಸುತ್ತಿದ್ದೀರಿ. ಹೋರಾಟದಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಗ್ರಹಿಸಿದ ಹಣದಲ್ಲಿ ನೀನು ಹಾಗೂ ನಿನ್ನ ಚಿಕ್ಕಪ್ಪ ದುಬಾರಿ ಕಾರುಗಳಲ್ಲಿ ಖರೀದಿಸಿದ್ದೀರಿ ಎಂದೂ ದೂರಿದ್ದಾರೆ.

ಈ ಪತ್ರಕ್ಕೆ ಹಾರ್ದಿಕ್ ಪಟೇಲ್ ಆಗಲಿ ಅಥವಾ ಅವರ ಸ್ನೇಹಿತರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇಶ ದ್ರೋಹದ ಆರೋಪದ ಮೇಲೆ ಕಳೆದ 9 ತಿಂಗಳಿಂದ ಜೈಲು ವಾಸ ಅನುಭವಿಸಿದ್ದ ಹಾರ್ದಿಕ್ ಪಟೇಲ್ ರನ್ನು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಚಿರಾಗ್ ಹಾಗೂ ಕೇತನ್ ಪಟೇಲ್ ಕೂಡ ದೇಶ ದ್ರೋಹದ ಆರೋಪದ ಮೇಲೆ ಹಾರ್ದಿಕ್ ಪಟೇಲ್ ಜೊತೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT