ದೇಶ

ಗುಜರಾತ್ ಶಾಸಕರ ಅಮಾನತು ಅಪ್ರಜಾಪ್ರಭುತ್ವವಾದದ್ದು: ಜೆಡಿಯು

Manjula VN

ನವದೆಹಲಿ: ಗುಜರಾತ್ ವಿಧಾನಸಭೆಯಲ್ಲಿ 50 ಕಾಂಗ್ರೆಸ್ ಶಾಸಕರನ್ನು ಅಮಾನತು ಮಾಡಿರುವುದೊಂದು ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು ಎಂದು ಜೆಡಿಯು ಮಂಗಳವಾರ ಹೇಳಿದೆ.

ಶಾಸಕರ ಅಮಾನತು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕ ಶರದ್ ಯಾದವ್ ಅವರು, ದಲಿತ ಮೇಲಿನ ಹಲ್ಲೆ ಖಂಡಿಸಿ ವಿಧಾನಸಭೆಯಲ್ಲಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ವಿಚಾರವನ್ನು ಚರ್ಚೆ ನಡೆಸಲು ಬದಲು ಶಾಸಕರನ್ನೇ ಅಮಾನತು ಮಾಡಿರುವುದು ಸರಿಯಲ್ಲ. ಈ ರೀತಿಯ ಆದೇಶ ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ವೊಂದು ಬಂದಿದೆ. ಇಂದು ಗುಜರಾತ್ ನಲ್ಲಿ ನಡೆದ ರೀತಿಯಲ್ಲೇ ಈ ಹಿಂದೆ ತಮಿಳುನಾಡಿನಲ್ಲಿ ನಡೆದಿತ್ತು. ವಿವಾದಿತ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸುವ ಬದಲು ಪ್ರತಿಭಟಿಸುವ ನಾಯಕರ ವಿರುದ್ಧವೇ ಕ್ರಮಕೈಗೊಳ್ಳಲಾಗುತ್ತಿದೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಬೆಳವಣಿಗೆ ಉತ್ತಮವಾದುದ್ದಲ್ಲ.
 
ನಾಯಕರನ್ನು ಅಮಾನತು ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕುವುದಿಲ್ಲ. ಎಲ್ಲರ ಅಭಿಪ್ರಾಯವನ್ನು ಕೇಳಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಚರ್ಚೆ ಮಾಡುವುದನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಶರದ್ ಯಾದವ್ ಅವರು ಹೇಳಿದ್ದಾರೆ.

SCROLL FOR NEXT