ಭಾರತದ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆ ಕಲ್ವರಿ (ಫೋಟೋ ಕೃಪೆ-ಟ್ವಿಟ್ಟರ್)
ನವದೆಹಲಿ: ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಪಟ್ಟ ಸೂಕ್ಷ್ಮ ಅಂಕಿಅಂಶಗಳು ಸೋರಿಕೆಯಾಗಿದ್ದು, ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸ ಮಾಡಿದ ಫ್ರಾನ್ಸ್ ನ ಹಡಗು ನಿರ್ಮಾಣ ಕಂಪೆನಿ ಡಿಸಿಎನ್ಎಸ್ ಕಂಪೆನಿ 22 ಸಾವಿರ ಪುಟಗಳ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪ ಎದುರಿಸುತ್ತಿದೆ ಎಂದು ಆಸ್ಟ್ರೇಲಿಯಾದ ವರದಿ ಬಹಿರಂಗಪಡಿಸಿದೆ.
ಆಸ್ಟ್ರೇಲಿಯಾದ ವರದಿಯಲ್ಲಿ ಪ್ರಕಟವಾಗಿರುವಂತೆ, ಆಸ್ಟ್ರೇಲಿಯಾಕ್ಕೆ 12 ಜಲಾಂತರ್ಗಾಮಿ ನೌಕೆಗಳನ್ನು ಮತ್ತು ಜಲಾಂತರ್ಗಾಮಿಗಳ ನೀರಿನೊಳಗಿನ ಸೆನ್ಸಾರ್ಸ್, ನೀರಿನ ಮೇಲಿನ ಸೆನ್ಸಾರ್ಸ್, ಯುದ್ಧ ನಿರ್ವಹಣಾ ವ್ಯವಸ್ಥೆ, ಲಾಂಚ್ ಸಿಸ್ಟಮ್ ಮತ್ತು ವಿಶೇಷಣಗಳು, ಸಂವಹನ ವ್ಯವಸ್ಥೆ ಮತ್ತು ಸಂಚರಣೆ ವ್ಯವಸ್ಥೆಗಳು ನೌಕಾ ಸ್ಫೋಟಕಗಳನ್ನು ವಿನ್ಯಾಸ ಮಾಡಲು ಇತ್ತೀಚೆಗೆ ಡಿಸಿಎನ್ಎಸ್ ಕಂಪೆನಿ ಗುತ್ತಿಗೆ ಪಡೆದುಕೊಂಡಿತ್ತು.
ಮಲೇಷಿಯಾ, ಚಿಲ್ ಮತ್ತು ಬ್ರೆಜಿಲ್ ಕೂಡ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ವೈವಿಧ್ಯತೆಗಳನ್ನು ಬಳಸಲು ಸದ್ಯದಲ್ಲಿಯೇ ಸದಸ್ಯತ್ವ ಪಡೆದುಕೊಳ್ಳಲಿವೆ.
ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಭಾರತದ ಕಲ್ವರಿಯಲ್ಲಿ ನಿರ್ಮಿಸಲಾಗಿದ್ದು ಕಳೆದ ಮೇ ತಿಂಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲು ಸಮುದ್ರಕ್ಕಿಳಿದಿತ್ತು ಮತ್ತು ಭಾರತದ ನೌಕಾಪಡೆಗೆ ಸದ್ಯದಲ್ಲಿಯೇ ಸೇರ್ಪಡೆಯಾಗಲಿದೆ.
ವರದಿಯಲ್ಲಿ ತಾಂತ್ರಿಕ ದಾಖಲೆಗಳ ಸೋರಿಕೆ ಆಸ್ಟ್ರೇಲಿಯಾಕ್ಕೆ ಪೂರೈಸಲಿರುವ ಜಲಾಂತರ್ಗಾಮಿ ನೌಕೆಯಲ್ಲಿ ಸಾಧ್ಯವಿಲ್ಲ. ಭಾರತದ ಕಡೆಯಲ್ಲಿ ಅಂತಹ ಸೋರಿಕೆಯಾಗಿರಬಹುದು ಎಂದು ಡಿಸಿಎನ್ಎಸ್ ಹೇಳಿದೆ.