ನವದೆಹಲಿ: ಜವಹರ್ ಲಾಲ್ ನೆಹರು ವಿಶ್ವ ವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ವಿದ್ಯಾರ್ಥಿನಿಯನ್ನು ಹಾಸ್ಟೆಲ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎನ್ನುವ ಆರೋ ಹೊತ್ತಿದ್ದ ಅನಮೋಲ್ ರತನ್ ಪೊಲೀಸರಿಗೆ ಇಂದು ವಸಂತ್ ಕುಂಜ್ ನಾರ್ತ್ ಪೊಲೀಸರಿಗೆ ಬುಧವಾರ ಬೆಳಗ್ಗೆ 10.15 ಕ್ಕೆ ಶರಣಾಗಿದ್ದಾನೆ.
ಎಐಎಸ್ಎ ವಿದ್ಯಾರ್ಥಿ ಸಂಘಟನೆಯ ಮುಖಂಡನೂ ಆಗಿರುವ 29ರ ಅನಮೋಲ್ ರತನ್, ಆರೋಪ ಕೇಳಿಬಂದ ನಂತರ ಕಳೆದ ಭಾನುವಾರದಿಂದ ತಲೆಮರೆಸಿಕೊಂಡಿದ್ದ.
ಆಲ್ ಇಂಡಿಯಾ ಸ್ಟುಡೆಂಡ್ ಅಸೋಸಿಯೇಷನ್ ಕಾರ್ಯಕರ್ತನಾಗಿದ್ದ ರತನ್, ವಿದ್ಯಾರ್ಥಿನಿಯನ್ನು ಹಾಸ್ಟೆಲ್ ರೂಂಗೆ ಕರೆದುಕೊಂಡು ಹೋಗಿ ಕಾಫಿಯಲ್ಲಿ ಮತ್ತು ಬರುವ ಔಷಧ ನೀಡಿ ಆಕೆಯನ್ನು ಅತ್ಯಾಚಾರ ಮಾಡಿದ್ದ ಎಂದು ದೂರು ದಾಖಲಾಗಿತ್ತು.