ನಿರ್ಭಯಾ ತಾಯಿ ಆಶಾ ದೇವಿ 
ದೇಶ

ವಿನಯ್ ಶರ್ಮ ಸತ್ತಿದ್ದರೆ ಸಮಾಧಾನವಾಗುತ್ತಿತ್ತು: ನಿರ್ಭಯಾ ತಾಯಿ

ತಪ್ಪಿತಸ್ಥನೊಬ್ಬನಿಗೆ ಶಿಕ್ಷೆ ನೀಡುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲವಾಗಿದ್ದು, ಆತ್ಮಹತ್ಯೆ ಪ್ರಯತ್ನದಲ್ಲಿ ವಿನಯ್ ಶರ್ಮಾ ಸತ್ತು ಹೋಗಿದ್ದರೆ ನನಗೆ ಸಮಾಧಾನವಾಗುತ್ತಿತ್ತು...

ನವದೆಹಲಿ: ತಪ್ಪಿತಸ್ಥನೊಬ್ಬನಿಗೆ ಶಿಕ್ಷೆ ನೀಡುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲವಾಗಿದ್ದು, ಆತ್ಮಹತ್ಯೆ ಪ್ರಯತ್ನದಲ್ಲಿ ವಿನಯ್ ಶರ್ಮಾ ಸತ್ತು ಹೋಗಿದ್ದರೆ ನನಗೆ ಸಮಾಧಾನವಾಗುತ್ತಿತ್ತು ಎಂದು ನಿರ್ಭಯಾ ತಾಯಿ ಆಶಾ ದೇವಿಯವರು ಗುರುವಾರ ಹೇಳಿದ್ದಾರೆ.

ವಿನಯ್ ಶರ್ಮಾ ಆತ್ಮಹತ್ಯೆ ಯತ್ನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ, ಒಬ್ಬ ಅಪರಾಧಿಗೆ ಶಿಕ್ಷೆ ನೀಡಲು ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆ ವಿಫವಾಗಿದೆ. ದೇಶದಲ್ಲಿ ಇಂತಹ ದೊಡ್ಡ ಘಟನೆಯೊಂದು ನಡೆದಿದೆ. ಈ ಪ್ರಕರಣದಿಂದ ದೇಶಕ್ಕೆ ಉತ್ತಮವಾದ ಪಾಠವನ್ನು ಹೇಳಬಹುದಿತ್ತು. ಒಬ್ಬ ಹೆಣ್ಣುಮಗಳಿಗೆ ಹಿಂಸೆ ನೀಡಿ, ಅತ್ಯಾಚಾರ ಮಾಡಿ ಧಾರುಣವಾಗಿ ಹತ್ಯೆ ಮಾಡಲಾಗಿದೆ. ಆದರೆ, ಅಪರಾಧಿಗೆ ಶಿಕ್ಷೆ ನೀಡಲು ಈ ವರೆಗೂ ಸಾಧ್ಯವಾಗಿಲ್ಲ.

ವಿನಯ್ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ ಸತ್ತು ಹೋಗಿದ್ದರೆಯೇ ನನಗೆ ಸಮಾಧಾನವಾಗುತ್ತಿತ್ತು. ಪಾಪಿಯೊಬ್ಬ ಭೂಮಿಯನ್ನು ಬಿಟ್ಟು ಹೋದನೆಂಬ ಸಮಾಧಾನವಿರುತ್ತಿತ್ತು. ಆದರೆ, ನಮ್ಮ ಸರ್ಕಾರ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯವಿದೆ ಎಂಬುದಕ್ಕೆ ಇದೊಂದು ಘಟನೆ ನಿದರ್ಶನವಾಗಿದೆ. ನನ್ನ ಮಗಳನ್ನು ಹೀನಾಯವಾಗಿ ಕೊಲೆ ಮಾಡಲಾಗಿದೆ. ನ್ಯಾಯಾಲಯ ಅಪರಾಧಿಗೆ ಶಿಕ್ಷೆ ನೀಡಲಿ, ಬಿಡಲಿ. ದೇವರು ಶಿಕ್ಷೆ ಕೊಡುತ್ತಾನೆ. ದೇವರ ಕಾನೂನು ಪಾಪಿಗಳನ್ನು ಹೆಚ್ಚು ದಿನ ಉಳಿಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ಭೂಮಿಯಲ್ಲಿ ಸಾಕಷ್ಟು ಜನರು ನಮ್ಮ ರೀತಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಸತ್ತು ಹೋಗಿರುವ ನನ್ನ ಮಗಳು ಮತ್ತೆ ಬರುವುದಿಲ್ಲ. ಆದರೆ, ನಮಗೆ ನ್ಯಾಯ ಸಿಗಬಹುದೆಂಬ ಅಲ್ಪಮಟ್ಟಿಗಿನ ವಿಶ್ವಾಸವಿದೆ. ಯಾವಾಗ ನ್ಯಾಯ ಸಿಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ನನ್ನ ಮಗಳ ಸಾವಿಗೆ ಕಾರಣರಾದವರಿಗೆ ಸಾವೇ ಶಿಕ್ಷೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಹತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ನಿನ್ನೆ ರಾತ್ರಿ ಕೆಲ ನಿಷೇಧಿತ ನೋವು ನಿವಾರಕಗಳನ್ನು ತೆಗೆದುಕೊಂಡಿದ್ದ ವಿನಯ್ ಶರ್ಮಾ ಬಳಿಕ ನೇಣಿಗೆ ಶರಣಾಗಲು ಪ್ರಯತ್ನಿಸಿದ್ದಾನೆ. ನಂತರ ಜೈಲಿನ ಭದ್ರತಾಧಿಕಾರಿಗಳು ವಿನಯ್ ಶರ್ಮನನ್ನು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದೀಗ ವಿನಯ್ ಶರ್ಮಾ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT