ಬಸ್ ಚಾಲಕನಿಗೆ ಹೃದಯಾಘಾತ (ಸಾಂದರ್ಭಿಕ ಚಿತ್ರ) 
ದೇಶ

ಚಲಿಸುತ್ತಿರುವಾಗಲೇ ಹೃದಯಾಘಾತ; ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಿಸಿ ಪ್ರಾಣ ಬಿಟ್ಟ ಚಾಲಕ!

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾದರೂ ಎದೆಗುಂದದ ಬಸ್ ಚಾಲಕನೋರ್ವ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಿಸಿ ಬಳಿಕ ಪ್ರಾಣಬಿಟ್ಟ ಘಟನೆ ಆಂಧ್ರ ಪ್ರದೇಶದ ಕುಪ್ಪಂ ನಲ್ಲಿ ನಡೆದಿದೆ.

ಚಿತ್ತೂರು: ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾದರೂ ಎದೆಗುಂದದ ಬಸ್ ಚಾಲಕನೋರ್ವ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಿಸಿ ಬಳಿಕ ಪ್ರಾಣಬಿಟ್ಟ ಘಟನೆ ಆಂಧ್ರ ಪ್ರದೇಶದ ಕುಪ್ಪಂ ನಲ್ಲಿ  ನಡೆದಿದೆ.

ಮೃತ ಚಾಲಕನನ್ನು 41 ವರ್ಷದ ಎ ವೆಂಕಟೇಶನ್ ಎಂದು ಗುರುತಿಸಲಾಗಿದ್ದು, ಖಾಸಗಿ ಬಸ್ ಕುಪ್ಪಂ ನಿಂದ ಪೆರ್ನಾಂಬುತ್ ಗೆ ತೆರಳುತಿತ್ತು ಎಂದು ತಿಳಿದುಬಂದಿದೆ. ಕುಪ್ಪನಿಂದ ತೆರಳಿದ  ಕೆಲವೇ ನಿಮಿಷಗಳಲ್ಲಿ ಚಾಲಕ ವೆಂಕಟೇಶನ್ ಗೆ ಎದೆ ನೋವು ಕಾಣಿಸಿಕೊಂಡಿದ್ದು, ಕುಪ್ಪಂ ಸರ್ಕಲ್ ಬಳಿ ಚಾಲಕ ಈ ವಿಚಾರವನ್ನು ಕಂಡಕ್ಟರ್ ನೊಂದಿಗೆ ಹೇಳಿದ್ದಾನೆ. ಬಸ್ ನಿಲ್ದಾಣ ತಲುಪಿದ  ಬಳಿಕ ವೈದ್ಯರ ಬಳಿ ಹೋಗು ಎಂದು ಹೇಳಿದ ನಿರ್ವಾಹಕ ತನ್ನ ಕೆಲಸ ಮುಂದುವರೆಸಿದ್ದಾನೆ. ಇದಾದ ಬಳಿಕ ಅದೇ ನೋವಿನಲ್ಲೇ ಸುಮಾರು 15 ನಿಮಿಷಗಳ ಕಾಲ ವೆಂಕಟೇಶನ್ ನಿಧಾನವಾಗಿ  ಬಸ್ ಚಲಾಯಿಸಿಕೊಂಡು ಬಂದು ಚಿತ್ತೂರ್ ನಲ್ಲಿರುವ ವೆಂಕಟಗಿರಿ ಕೋಟ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾನೆ.

ಬಳಿಕ ಚಾಲಕ ವೆಂಕಟೇಶ್ ಹಾಗೂ ನಿರ್ವಾಹಕ ನಿಲ್ದಾಣದ ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿಯಲು ಹೋಗಿದ್ದು, ಚಾಲಕ ಅಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ.

ಇದಾವ ವಿಚಾರವೂ ತಿಳಿಯದ ಪ್ರಯಾಣಿಕರು ಬಸ್ ತಡವಾಗಿದ್ದಕ್ಕೆ ಚಾಲಕನನ್ನೇ ನಿಂದಿಸಿಕೊಂಡು ಮತ್ತೆ ಬಸ್ ಹತ್ತಿದ್ದಾರೆ. ಸುಮಾರು ಅರ್ಧಗಂಟೆಯಾದರೂ ಬಸ್ ಚಾಲಕ ಬಾರದ ಕಾರಣ  ಗಲಾಟೆ ಮಾಡಿದ ಪ್ರಯಾಣಿಕರು ಈ ಬಗ್ಗೆ ನಿರ್ವಾಹಕರಲ್ಲಿ ಕೇಳಿದಾಗ ಆತ ಚಾಲಕ ಮೃತಪಟ್ಟ ವಿಚಾರವನ್ನು ತಿಳಿಸಿದ್ದಾರೆ. ವೆಂಕಟೇಶನ್ ಬಸ್ ಚಾಲನೆ ಮಾಡುವಾಗ ಬಸ್ ನಲ್ಲಿ ಸುಮಾರು  35ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ವೆಂಕಟಗಿರಿ ಕೋಟ ಬಸ್ ನಿಲ್ದಾಣಕ್ಕೆ ಆಗಮಿಸಿದ ಕುಪ್ಪಂ ಸರ್ಕಲ್ ಇನ್ಸ್ ಪೆಕ್ಟರ್, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೃತ ಚಾಲಕ  ವೆಂಕಟೇಶನ್ ಅವರ ಕುಟುಂಬಸ್ಥರಿಗೂ ವಿಚಾರ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!