ದೇಶ

ಕಾಶ್ಮೀರ ಗಲಭೆಯನ್ನು ಉತ್ತೇಜಿಸುತ್ತಿರುವ 400 ಸ್ಥಳೀಯ ನಾಯಕರ ಬಂಧನಕ್ಕೆ ಸಿದ್ಧತೆ

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಗಲಭೆಯನ್ನು ಉತ್ತೇಜಿಸುತ್ತಿರುವ 400 ಸ್ಥಳೀಯ ನಾಯಕರನ್ನು ಗುರುತಿಸಲಾಗಿದ್ದು, ಕೇಂದ್ರ ಭದ್ರತಾ ಸಂಸ್ಥೆಗಳು ಸ್ಥಳೀಯ ನಾಯಕರ ಹೆಸರಿನ ಪಟ್ಟಿಯನ್ನು ಜಮ್ಮು-ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದೆ.

ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪ್ರತಿಭಟನೆ, ಗಲಭೆಗಳನ್ನು ಉತ್ತೇಜಿಸುತ್ತಿರುವವರ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಭದ್ರತಾ ಪಡೆಗಳು, ಕೇಂದ್ರ ಸಂಸ್ಥೆಗಳು ಅಭಿಪ್ರಾಯ ಹೊಂದಿದ್ದು, ಗಲಭೆಯನ್ನು ಉತ್ತೇಜಿಸುತ್ತಿರುವ 400 ಸ್ಥಳೀಯ ನಾಯಕರನ್ನು ಸಾರ್ವಜನಿಕ ರಕ್ಷಣಾ ಕಾಯಿದೆಯಡಿ ಬಂಧಿಸುವ ಸಾಧ್ಯತೆ ಇದೆ.

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್, ತೆಹ್ರೀಕ್-ಇ- ಹುರಿಯತ್ ಸಂಘಟನೆಗಳ ನಾಯಕರು ಗಲಭೆಯನ್ನು ಉತ್ತೇಜಿಸುತ್ತಿದ್ದು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ 10-12 ವರ್ಷದ ಯುವಕರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಭದ್ರತಾ ಸಂಸ್ಥೆಗಳು, ಗುಪ್ತಚರ ಇಲಾಖೆ ತಿಳಿಸಿದೆ.

2010 ರಲ್ಲಿ ಗಲಭೆ ಉಂಟಾದಾಗ ಇದೇ ಮಾದರಿಯಲ್ಲಿ ಗಲಭೆ ಉಂಟಾಗಲು ಕಾರಣವಾದವರನ್ನು ಬಂಧಿಸಲಾಗಿತ್ತು. ಹಾಗೆಯೇ ಈಗ ಕಾಶ್ಮೀರದಲ್ಲಿ ಉಂಟಾಗಿರುವ ಗಲಭೆಗೆಯನ್ನು ನಿಯಂತ್ರಿಸಲು ಪ್ರತಿಭಟನಾ ನಿರಂತರ ಮೇಲೆ ಕ್ರಮ ಕೈಗೊಳ್ಳುವ ಬದಲು ಗಲಭೆಯನ್ನು ಉತ್ತೇಜಿಸುತ್ತಿರುವವರನ್ನು ಬಂಧಿಸಬೇಕು ಎಂದು ರಾಜನಾಥ್ ಸಿಂಗ್ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.       

SCROLL FOR NEXT