ಕ್ರೀಡೆಗೆ ಸ್ಫೂರ್ತಿಯ ಅಗತ್ಯವಿದೆ: ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ ನ...
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ ನ 23ನೇ ಸರಣಿಯಲ್ಲಿ ಭಾನುವಾರ ಮಾತನಾಡಿದರು.
ತಂತ್ರಜ್ಞಾನ, ಸಾಮಾಜಿಕ ಮಾಧ್ಯಮ, ಮೊಬೈಲ್, ಆಪ್ ಎಂದು ಬಹಳ ಇಷ್ಟಪಡುವ ಪ್ರಧಾನಿ ಮೋದಿಯವರು ತಮ್ಮ ಮೋದಿ ಆಪ್ ಮತ್ತು MyGov Open Forumನಲ್ಲಿ 23ನೇ ಸರಣಿಯ ಮನ್ ಕಿ ಬಾತ್ ನಲ್ಲಿ ಯಾವ ವಿಷಯದ ಕುರಿತು ಮಾತನಾಡಬೇಕೆಂದು ವಿಷಯ, ಅಭಿಪ್ರಾಯ ಕಳುಹಿಸುವಂತೆ ಕೇಳಿದ್ದರು. ಅದಕ್ಕೆ ಜನರು ಪ್ರತಿಕ್ರಿಯಿಸಿ 2020ನೇ ಒಲಿಂಪಿಕ್ಸ್, ಗಡಿ ವಿವಾದ, ಧರ್ಮ ಮತ್ತು ಶಿಕ್ಷಣ ಸುಧಾರಣೆ ಬಗ್ಗೆ ಮಾತನಾಡುವಂತೆ ಹೇಳಿದ್ದರು.
ಅವರ ಭಾಷಣದ ಮುಖ್ಯಾಂಶಗಳು ಇಂತಿವೆ:
1. ನರೇಂದ್ರ ಮೋದಿ ಆಪ್ ನಲ್ಲಿ ವಿವಿಧ ತರಹದ ಸಂದೇಶಗಳು ಬರುತ್ತಿರುತ್ತವೆ. ಆದರೆ ಈ ಸಲ ಒಲಿಂಪಿಕ್ಸ್ ಬಗ್ಗೆ ಅನೇಕ ಸಂದೇಶಗಳು ಬಂದವು.
2. ಕ್ರೀಡೆಯ ವಿಷಯದಲ್ಲಿ ಭಾರತ ಇನ್ನಷ್ಟು ಮುಂದೆ ಸಾಗಬೇಕಾಗಿದೆ. ಕ್ರೀಡೆಗೆ ಸ್ಫೂರ್ತಿ ಅತ್ಯಂತ ಅಗತ್ಯವಾಗಿದ್ದು ಜನರು ಈ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡಬೇಕು.
3. ಹಾಕಿ ದಂತಕಥೆ ಧ್ಯಾನ್ ಚಂದ್ ಅವರ 29ನೇ ಜನ್ಮ ದಿನಾಚರಣೆ ಆಗಸ್ಟ್ 29ರಂದು. ಈ ದಿನವನ್ನು ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಎಂದು ಕರೆಯಲಾಗುತ್ತದೆ.ಧ್ಯಾನ್ ಚಂದ್ ಗೋಲುಗಳನ್ನು ರನ್ ತರಹ ದಾಖಲಿಸುತ್ತಿದ್ದರು.
4. ಇತ್ತೀಚೆಗೆ ಜನರು ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿರುವುದು ಉತ್ತಮ ಸೂಚನೆ.
5.ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಗಮನ ಕೇಂದ್ರೀಕರಿಸಬೇಕೆಂದು ನಮ್ಮ ದೇಶ ಬಯಸುತ್ತಿರುವುದು ಉತ್ತಮ ಬೆಳವಣಿಗೆ.
6. ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
7. ಜಿಮ್ನಾಸ್ಟಿಕ್ ನಲ್ಲಿ 4ನೇ ಸ್ಥಾನ ಗಳಿಸಿದ ದೀಪಾ ಕರ್ಮಕರ್ ಅವರ ಸಾಧನೆ ನಿಜಕ್ಕೂ ಪ್ರಶಂಸನೀಯ.
8. ಅನೇಕ ವಿಭಾಗಗಳಲ್ಲಿ ಭಾರತದ ಆಟಗಾರರು ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ಮಾಡಿದ್ದಾರೆ. ದೀಪಾ ಕರ್ಮಕರ್, ಲಲಿತಾ ಬಾಬರ್, ಅಭಿನವ್ ಬಿಂದ್ರಾ, ವಿಕಾಸ್ ಕೃಷ್ಣನ್ ಯಾದವ್ ಅವರು ಕೂಡ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
9. ಕ್ರೀಡೆಯಲ್ಲಿನ ಬೆಳವಣಿಗೆ ಬಗ್ಗೆ ಮೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಿದ್ದೇವೆ. ಇದು ಮುಂದಿನ ಒಲಿಂಪಿಕ್ಸ್ ಹಾಗೂ ಕ್ರೀಡಾಪಟುಗಳ ಬಗ್ಗೆ ಮಾರ್ಗದರ್ಶನ ಮಾಡಲಿದೆ. ಕ್ರೀಡೆಯಲ್ಲಿನ ಸಾಧನೆ, ಪ್ರಗತಿ ಬಗ್ಗೆ ರಾಜ್ಯ ಸರ್ಕಾರಗಳೂ ಕೂಡ ಮೇಲ್ವಿಚಾರಣೆ ನಡೆಸಬೇಕು.
10. ಸೆಪ್ಟೆಂಬರ್ 5 ಕೇವಲ ಶಿಕ್ಷಕರ ದಿನಾಚರಣೆ ಮಾತ್ರವಲ್ಲದೆ ಕಲಿಕೆಯ ದಿನ ಕೂಡ ಹೌದು. ನಮ್ಮ ಜೀವನದಲ್ಲಿ ತಾಯಿಯಂತೆ ಶಿಕ್ಷಕರೂ ಕೂಡ ಮುಖ್ಯ.
12. ವಿದ್ಯಾರ್ಥಿಗಳ ಕಾಳಜಿಯಲ್ಲಿ ಶಿಕ್ಷಕರು ತಮ್ಮ ಜೀವನದ ಬಹು ಸಮಯವನ್ನು ಕಳೆಯುತ್ತಾರೆ.ಪಿ.ವಿ.ಸಿಂಧು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಆಟದ ಮತ್ತು ಆಪ್ತಸಲಹಾ ಕಡೆಗೆ ಸಮರ್ಪಣೆಯಿಂದಾಗಿ ಇಂದು ಬೆಳ್ಳಿ ಪದಕ ಗೆದ್ದು ತರಲಾಯಿತು.