ಸಾಂದರ್ಭಿಕ ಚಿತ್ರ 
ದೇಶ

ದುಬೈಯಿಂದ ಗೋವಾಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ 2.5 ಕೆಜಿ ಚಿನ್ನ ಪತ್ತೆ

ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಎರಡೂವರೆ ಕೆಜಿ ತೂಕದ ಚಿನ್ನವನ್ನು ಸುಂಕ ಮತ್ತು ಕೇಂದ್ರ ಅಬಕಾರಿ...

ಪಣಜಿ: ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಎರಡೂವರೆ ಕೆಜಿ ತೂಕದ ಚಿನ್ನವನ್ನು ಸುಂಕ ಮತ್ತು ಕೇಂದ್ರ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಮಾನ ದುಬೈಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಗಮಿಸಿತ್ತು.
''ವಿಮಾನದ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಡಲಾಗಿತ್ತು. ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಎರಡೂವರೆ ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಅದರ ವಾರಸುದಾರರು ಯಾರೆಂದು ಗೊತ್ತಾಗಿಲ್ಲ ಎನ್ನುತ್ತಾರೆ ಸುಂಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ವಿಮಾನಕ್ಕೆ ಹತ್ತಿದ ಪ್ರಯಾಣಿಕರನ್ನು ಕೂಡ ತಪಾಸಣೆ ನಡೆಸಲಾಗುತ್ತದೆ.
ಸುಂಕ ಅಧಿಕಾರಿಗಳು ತಮ್ಮ ನಿಯಮಗಳನ್ನು ಮುಗಿಸಿದ ನಂತರ ವಿಮಾನ ಗೋವಾದಿಂದ ಬೆಂಗಳೂರಿಗೆ ಹೊರಟಿತು. ಏರ್ ದುಬೈಯಿಂದ ಗೋವಾಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಹೀಗೆ ವಾರಸುದಾರರಿಲ್ಲದ ಚಿನ್ನ ಸಿಗುತ್ತಿರುವುದು ಈ ವರ್ಷದಲ್ಲಿ  ಇದು ಮೂರನೇ ಸಲ ಎಂದು ವಕ್ತಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ