ದೇಶ

ಬಿಹಾರ ಬಿಸಿಯೂಟ ದುರುಂತ: ಪ್ರಿನ್ಸಿಪಲ್ ಮೀನಾದೇವಿಗೆ 10 ವರ್ಷ ಜೈಲು ಶಿಕ್ಷೆ

Lingaraj Badiger
ಛಾಪ್ರ: ಬಿಹಾರದ ಸರನ್ ಜಿಲ್ಲೆಯ ಗಂಡಮಾನ್ ಹಳ್ಳಿಯ ಶಾಲೆಯಲ್ಲಿ ನಡೆದ ಮಧ್ಯಾಹ್ನ ಬಿಸಿಯೂಟ ದುರಂತಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾದೇವಿ ಅವರಿಗೆ ಛಾಪ್ರಾ ಕೋರ್ಟ್ ಸೋಮವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದೊಂದು ಅಪರೂಪಗಳಲ್ಲಿ ಅಪರೂಪ ಪ್ರಕರಣ ಎಂದು ಪರಿಗಣಿಸಿರುವ ಕೋರ್ಟ್, ನಿರ್ಲಕ್ಷ್ಯತನದಿಂದ ಈ ನರಹತ್ಯೆ ನಡೆದಿದ್ದು, ಈ ಕೊಲೆ ಮತ್ತು ಅಪರಾಧ ಪ್ರಕರಣದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಪ್ಪಿತಸ್ಥೆ ಎಂದು ತೀರ್ಪು ನೀಡಿದೆ.
ಛಾಪ್ರಾದಿಂದ 25 ಕಿ.ಮೀ ಹಾಗೂ ಪಾಟ್ನಾದಿಂದ 60 ಕಿ.ಮೀ.ದೂರದಲ್ಲಿರುವ ಗಂಡಮಾನ್ ಹಳ್ಳಿಯ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವನೆಯಿಂದ 21 ಮಕ್ಕಳು ಮೃತಪಟ್ಟಿದ್ದವು. 
ಜುಲೈ 16, 2013ರಂದು ನಡೆದ ಈ ದುರಂತ ಸಂಬಂಧ ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾದೇವಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
SCROLL FOR NEXT