ದೇಶ

ಪಾಕಿಸ್ತಾನಕ್ಕೆ ಎನ್ಎಸ್ ಜಿ ಏಕೆ ಬೇಕು?: ಪಾಕ್ ಪತ್ರಿಕೆ

Srinivas Rao BV

ಇಸ್ಲಾಮಾಬಾದ್: ಪರಮಾಣು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಯಾಗುವ ಪಾಕಿಸ್ತಾನದ ಪ್ರಯತ್ನವನ್ನು ಪಾಕಿಸ್ತಾನದ ಪತ್ರಿಕೆಯೇ ಪ್ರಶ್ನಿಸಿದೆ.

ಜವಾಬ್ದಾರಿಯುತ ಪರಮಾಣು ರಾಷ್ಟ್ರವಾಗಿ ಪಾಕಿಸ್ತಾನ ಪರಮಾಣು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಗೊಳ್ಳುವುದಕ್ಕೂ ಮುನ್ನ ತನ್ನ ಅರ್ಹತೆಗಳನ್ನು ನಿರೂಪಿಸಬೇಕಾಗುತ್ತದೆ ಎಂದು ಡೈಲಿ ಟೈಮ್ಸ್  ಸಲಹೆ ನೀಡಿದೆ. ಇದೆ ವೇಳೆ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಎನ್ ಎಸ್ ಜಿ ಗೆ ಸೇರಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನವನ್ನು ದಿನಪತ್ರಿಕೆ ಟೀಕಿಸಿದೆ.

ಎನ್ಎಸ್ ಜಿ ಗೆ ಸೇರುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಇತ್ತೀಚೆಗಷ್ಟೇ ಅಮೆರಿಕಾಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸಂಪಾದಕೀಯ ಲೇಖನ ಪ್ರಕಟಿಸಿರುವ ಡೈಲಿ ಟೈಮ್ಸ್, ದೇಶದಲ್ಲಿ ಬಡತನ ಹೆಚ್ಚುತ್ತಿದ್ದರೂ ಪಾಕಿಸ್ತಾನಕ್ಕೆ ಎನ್ ಎಸ್ ಜಿ ಮುಖ್ಯವಾಗಿದೆ ಎಂದು ಡೈಲಿ ಟೈಮ್ಸ್ ಟೀಕಿಸಿದೆ ಅಷ್ಟೇ ಅಲ್ಲದ ಎನ್ ಎಸ್ ಜಿ ವಿಚಾರದಲ್ಲಿ ಪಾಕಿಸ್ತಾನವೇಕೆ ಭಾರತದೊಂದಿಗೆ ಸ್ಪರ್ಧೆ ನಡೆಸುತ್ತಿದೆ ಎಂದು ಪ್ರಶ್ನಿಸಿದೆ.

SCROLL FOR NEXT