ಸಾಂದರ್ಭಿಕ ಚಿತ್ರ 
ದೇಶ

ಗ್ಯಾಂಗ್ ರೇಪ್, ಅಪ್ರಾಪ್ತ ಬಾಲಕಿ ಕೊಲೆ ಆರೋಪದಲ್ಲಿ ಕೋಲ್ಕತ್ತಾದ ಇಬ್ಬರು ಓಲಾ ಚಾಲಕರ ಬಂಧನ

12 ವರ್ಷದ ಬಾಲಕಿಯನ್ನು ರೇಪ್ ಮಾಡಿ ಕೊಂದಿರುವ ಆರೋಪದ ಮೇಲೆ ಜನಪ್ರಿಯ ಅಂತರ್ಜಾಲ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾದ ಇಬ್ಬರು ಚಾಲಕರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ.

ಕೋಲ್ಕತ್ತಾ: 12 ವರ್ಷದ ಬಾಲಕಿಯನ್ನು ರೇಪ್ ಮಾಡಿ ಕೊಂದಿರುವ ಆರೋಪದ ಮೇಲೆ ಜನಪ್ರಿಯ ಅಂತರ್ಜಾಲ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾದ ಇಬ್ಬರು ಚಾಲಕರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. 
ಶಂಕರ್ ಷಾ ಮತ್ತು ಗುದ್ದು ಸಿಂಗ್, ಕಳೆದ ರಾತ್ರಿ ಬಾಲಕಿಯನ್ನು ಅಪಹರಿಸಿ ಓಲಾ ಟ್ಯಾಕ್ಸಿಯಲ್ಲಿ ಅವರನ್ನು ಪಾರ್ಕ್ ಸರ್ಕಸ್ ಮೇಲುಸೇತುವೆ ಬಳಿ ಕರೆದೊಯ್ದು ರೇಪ್ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ರಾತ್ರಿ ಪೂರ್ತಿ ಬಾಲಕಿಯನ್ನು ಗ್ಯಾಂಗ್ ರೇಪ್ ಮಾಡಿದ ಬಳಿಕ ಬೆಳಗ್ಗೆ ಸುಮಾರು 5 ಘಂಟೆಗೆ ಬಾಲಕಿಯನ್ನು ಕತ್ತು ಹಿಸುಕಿ ಕೊಂದು ಟೋಪಿಸಾ ಮೇಲುಸೇತುವೆ ಕೆಳಗೆ ಹರಿಯುವ ನಾಲೆಯಲ್ಲಿ ದೇಹವನ್ನು ಬಿಸಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. 
"ಹರೇ ಸ್ಟ್ರೀಟ್ ಪೊಲೀಸ್ ಠಾಣೆಯ ತಂಡ ಈ ಇಬ್ಬರನ್ನು ಬಂಧಿಸಿದ್ದು, ಅವರು ತಪ್ಪೊಪ್ಪಿಕೊಂಡಿದ್ದಾರೆ" ಎಂದು ಕೂಡ ಅವರು ಹೇಳಿದ್ದಾರೆ. 
ಇಬ್ಬರೂ ಕಂಠ ಪೂರ್ತಿ ಮದ್ಯ ಸೇವನೆ ಮಾಡಿ ಸುಲಭ ಗುರಿ ಹುಡುಕಿ ಹೊರಟಿದ್ದಾಗ ಬಾರ್ಬೊರ್ನ್ ರಸ್ತೆಯ ಬದಿ ಮಲಗುವ ಬಾಲಕಿಯನ್ನು ಕಂಡು ಅಪಹರಿಸಿದ್ದಾರೆ. ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಬಾಲಕಿಯ ತಾಯಿ ಅಲ್ಲಿಯೇ ಹತ್ತಿರದ ಅಂಗಡಿಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾರೆ. 
"ಖಾಸಗಿ ಕಾರ್ ಒಂದರಲ್ಲಿ ಬಾಲಕಿಯನ್ನು ಅಪಹರಿಸಿರುವ ಮಾಹಿತಿ ನಮಗೆ ತಿಳಿಯಿತು. ಟ್ರಾಫಿಕ್ ನಿಯಂತ್ರಣ ಕಚೇರಿಯಿಂದ ನಮಗೆ ಕಾರಿನ ನೋಂದಣಿ ಸಂಖ್ಯೆ ಲಭ್ಯವಾಯಿತು ಆಗ ಎಲ್ಲ ಪೊಲೀಸ್ ಠಾಣೆಗೂ ಮುನ್ನೆಚ್ಚರಿಕೆ ನೀಡಿದೆವು" ಎಂದು ಅವರು ಹೇಳಿದ್ದಾರೆ. 
ನಾಲೆಯ ಹತ್ತಿರ ಬಾಲಕಿಯ ನಗ್ನ ದೇಹ ಪತ್ತೆಯಾಗಿದ್ದು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಂತರ ಸಂಜೆ ಓಲಾ ವಕ್ತಾರ ಹೇಳಿಕೆ ನೀಡಿದ್ದು, ಈ ಟ್ಯಾಕ್ಸಿಗೆ ಸಂಬಂಧಿಸಿದ ಖಾತೆಯನ್ನು ವಜಾಗೊಳಿಸಲಾಗಿದೆ ಎಂದಿದ್ದಾರೆ. 
ಈ ಪ್ರಕರಣದ ತನಿಖೆಗೆ ಲಭ್ಯವಿರುವ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಿದ್ದೇವೆ ಎಂದು ಕೂಡ ಓಲಾ ವಕ್ತಾರ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ