ದೇಶ

ಆಲ್ ಇಂಡಿಯಾ ರೆಡಿಯೋದಿಂದ ಶೀಘ್ರ ಬಲೋಚಿ ಭಾಷೆಯಲ್ಲಿ ಕಾರ್ಯಕ್ರಮ

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪಾಕಿಸ್ತಾನದ ಬಲೋಚಿಸ್ತಾನವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಆಲ್ ಇಂಡಿಯಾ ರೇಡಿಯೋ ಶೀಘ್ರದಲ್ಲೇ ಬಲೋಚಿಸ್ತಾನ ಪ್ರಾಂತ್ಯದ ಹಾಗೂ ಇತರೆ ಪ್ರದೇಶಗಳ ಜನತೆಗಾಗಿ ಬಲೋಚಿ ಭಾಷೆಯಲ್ಲಿ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿದೆ.
ಆಲ್ ಇಂಡಿಯಾ ರೇಡಿಯೋ ಮೂಲಗಳ ಪ್ರಕಾರ, ಬಲೋಚಿ ಭಾಷೆಯಲ್ಲಿ ಕಾರ್ಯಕ್ರಮ ಆರಂಭಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ.
ಕೇಂದ್ರ ಸರ್ಕಾರದ ಈ ಹೊಸ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಅವರು, ಇದು ಸರ್ಕಾರದ ನಿಯಮಗಳ ಒಂದು ಭಾಗ ಅಷ್ಟೆ. ಮುಂದೆ ಅವರು ಯಾವ ರೀತಿಯ ಕಾರ್ಯಕ್ರಮಗಳನ್ನು ಕೊಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಲೋಚಿಸ್ತಾನ, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹೇಳುವ ಮೂಲಕ ಇಸ್ಲಾಮಾಬಾದ್ ನ ಟೀಕೆಗೆ ಗುರಿಯಾಗಿದ್ದರು.
SCROLL FOR NEXT