ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಜೊತೆ ಸಭೆಗೂ ಮುನ್ನ.
ನವದೆಹಲಿ: ಪಾಕಿಸ್ತಾನವನ್ನು ಮತ್ತಷ್ಟು ಪ್ರತ್ಯೇಕಿಸಲು ಸಾಧ್ಯವಾಗಿರುವ, ಆಫ್ಘಾನಿಸ್ತಾನವನ್ನು ಬಲಗೊಳಿಸಿ ಮತ್ತಷ್ಟು ಸ್ಥಿರಗೊಳಿಸಲು ತ್ರಿಪಕ್ಷೀಯ ಸಹಕಾರವನ್ನು ಆರಂಭಿಸಲು ಭಾರತ ಮತ್ತು ಅಮೆರಿಕ ಘೋಷಿಸಿವೆ.
ಮೂರೂ ರಾಷ್ಟ್ರಗಳು ಮುಂದಿನ ತಿಂಗಳು ತ್ರಿಪಕ್ಷೀಯ ಸಹಕಾರ ಮಾತುಕತೆಯನ್ನು ವಿಶ್ವಸಂಸ್ಥೆಯ 71ನೇ ಸಾಮಾನ್ಯ ಸಭೆಯಲ್ಲಿ ಸಂದರ್ಭದಲ್ಲಿ ಆರಂಭಿಸಲಿದ್ದಾರೆ. ಅದೇ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವುದಾಗಿ ಪಾಕಿಸ್ತಾನ ಬೆದರಿಕೆಯೊಡ್ಡಿದೆ.
ನಿನ್ನೆ ದೆಹಲಿಯಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಮತ್ತು ಲಷ್ಕರ್ -ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ಡಿ-ಕಂಪೆನಿಯಂಥ ಭಯೋತ್ಪಾದತ ಜಾಲಗಳನ್ನು ನಾಶಮಾಡಬೇಕು. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭಯೋತ್ಪಾದನೆ ಬಗ್ಗೆ ನಾನು ಕೆರ್ರಿಯವರಿಗೆ ವಿವರಿಸಿದ್ದೇನೆ. ದೇಶ ಯಾವತ್ತೂ ದ್ವಿಮುಖ ಧೋರಣೆ ಹೊಂದಿರಬಾರದು. ಭಯೋತ್ಪಾದಕರಲ್ಲಿ ಒಳ್ಳೆಯವರು, ಕೆಟ್ಟವರೆಂದಿಲ್ಲ. ದೇಶಗಳು ಸಹ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಅಭಯಾರಣ್ಯವಾಗಬಾರದು ಎಂದು ಹೇಳಿದರು.
ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಮಾತನಾಡಿ, ಭಯೋತ್ಪಾದಕರಲ್ಲಿ ಒಳ್ಳೆಯವರು, ಕೆಟ್ಟವರೆಂಬುದಿಲ್ಲ. ಮುಂಬೈ ಮತ್ತು ಪಠಾಣ್ ಕೋಟ್ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಭಾರತ-ಅಮೆರಿಕ-ಆಫ್ಘಾನಿಸ್ತಾನ ತ್ರಿಪಕ್ಷೀಯ ಮಾತುಕತೆಗೆ ಸಂಬಂಧಪಟ್ಟಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆರ್ರಿ, ಭಾರತ ಮತ್ತು ಪಾಕಿಸ್ತಾನಕ್ಕೆ ಶಾಂತಿಯುತ, ಸ್ಥಿರ ಆಫ್ಘಾನಿಸ್ತಾನವಾಗಬೇಕೆಂಬ ಬಯಕೆಯಿದೆ. ಪಾಕಿಸ್ತಾನ ಪ್ರತ್ಯೇಕ ಎಂದು ಭಾವಿಸದೆ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
ದಕ್ಷಿಣ ಏಷ್ಯಾ ಪ್ರವಾಸದಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ, ಭಯೋತ್ಪಾದನೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ನಂತರ ಮೊನ್ನೆ ಸೋಮವಾರ ಭಾರತಕ್ಕೆ ಆಗಮಿಸಿದ್ದರು. ಇಸ್ಲಾಮಾಬಾದ್ ಭೇಟಿಯನ್ನು ರದ್ದುಪಡಿಸಿದ ಅವರು, ಈ ಮೂಲಕ ಭಯೋತ್ಪಾದನೆಗೆ ಅಮೆರಿಕ ಪ್ರೋತ್ಸಾಹ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ.
ರಾಷ್ಟ್ರದ ಏಕತೆಗೆ ಆಫ್ಘಾನಿಸ್ತಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಮೋದಿ ಸರ್ಕಾರ, ಪಾಕಿಸ್ತಾನದ ಇಚ್ಛೆಗೆ ವಿರುದ್ಧವಾಗಿ ಆಫ್ಘಾನಿಸ್ತಾನಕ್ಕೆ ಮಿಲಿಟರಿ ನೆರವು ನೀಡಲು ಭಾರತ ತನ್ನ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡಿದೆ.