ದೇಶ

ರಾಬರ್ಟ್‌ ವಾದ್ರಾ ಭೂ ಅಕ್ರಮ ಖಚಿತಪಡಿಸಿದ ನ್ಯಾ.ಧಿಂಗ್ರಾ ವರದಿ

Lingaraj Badiger
ಚಂಡೀಗಢ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ. ಎಸ್‌.ಎನ್‌. ಧಿಂಗ್ರಾ ಅವರ ಏಕಸದಸ್ಯ ತನಿಖಾ ಆಯೋಗ ಬುಧವಾರ ಹರ್ಯಾಣ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸೋನಿಯಾ ಅಳಿಯ ಅಕ್ರಮ ಎಸಗಿರುವುದು ಖಚಿತವಾಗಿದೆ.
ತನಿಖಾ ವರದಿಯ ಬಗ್ಗೆ ಯಾವುದೇ ಮಾಹಿತಿ ನೀಡಲರು ನಿರಾಕರಿಸಿರುವ ನ್ಯಾ.ಧಿಂಗ್ರಾ ಅವರು, ಒಂದು ವೇಳೆ ಭೂ ಅವ್ಯವಹಾರ ನಡೆಯದೇ ಇದ್ದರೆ ನಾನು 182 ಪುಟಗಳ ವರದಿ ನೀಡುತ್ತಿರಲಿಲ್ಲ. ಕೇವಲ ಒಂದು ಸಾಲಿನ ವರದಿ ನೀಡುತ್ತಿದೆ ಎಂದು ಹೇಳುವ ಮೂಲಕ ಅಕ್ರಮ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಇನ್ನು ಹರ್ಯಾಣ ಸರ್ಕಾರ ಸಹ  ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಆದರೆ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ವಾದ್ರಾ ಕಂಪನಿಗೆ ಭೂಮಿ ನೀಡುವಲ್ಲಿ ಮಾಜಿ ಸಿಎಂ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನುನನ್ನು ಉಲ್ಲಂಘಿಸಿರುವುದಾಗಿ ಧಿಂಗ್ರಾ ಆಯೋಗ ಪತ್ತೆ ಹಚ್ಚಿರುವುದಾಗಿ ಮೂಲಗಳು ತಿಳಿಸಿವೆ. ಕಾನೂನನ್ನು ಗಾಳಿಗೆ ತೂರಿರುವ ಹೂಡಾ ಅವರು ರಾಬರ್ಟ್ ವಾದ್ರಾಗೆ ಭೂಮಿಯನ್ನು ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ವಿವರಿಸಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆ ನಡೆಸಲು ಬಿಜೆಪಿ ನೇತೃತ್ವದ ಖಟ್ಟರ್ ಸರ್ಕಾರ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತ್ತು. ಆ ಆಯೋಗಕ್ಕೆ ದೆಹಲಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಸ್ ಎನ್ ಧಿಂಗ್ರಾ ಅವರನ್ನು ನೇಮಕ ಮಾಡಿತ್ತು.
SCROLL FOR NEXT