ಸಾಂದರ್ಭಿಕ ಚಿತ್ರ 
ದೇಶ

ಶೇಕಡಾ 95ರಷ್ಟು ಅತ್ಯಾಚಾರ ಆರೋಪಿಗಳು ಅಪ್ರಾಪ್ತ ಸಂತ್ರಸ್ತರಿಗೆ ಪರಿಚಯಸ್ಥರು

ಅಪರಿಚಿತರನ್ನು ಬಿಟ್ಟುಹಾಕಿ, ನಿಮ್ಮ ಮಗು ನಿಮ್ಮ ಕುಟುಂಬದ ಸದಸ್ಯರು, ಹತ್ತಿರದ ಬಂಧುಗಳು, ನೆರೆಹೊರೆಯವರು, ಸ್ವಂತ ಸೋದರರು...

ಚೆನ್ನೈ: ಅಪರಿಚಿತರನ್ನು ಬಿಟ್ಟುಹಾಕಿ, ನಿಮ್ಮ ಮಗು ನಿಮ್ಮ ಕುಟುಂಬದ ಸದಸ್ಯರು, ಹತ್ತಿರದ ಬಂಧುಗಳು, ನೆರೆಹೊರೆಯವರು, ಸ್ವಂತ ಸೋದರರು, ತಾತಂದಿರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯವಿದೆ.
ರಾಷ್ಟ್ರೀಯ ಅಪರಾಧ ದಾಖಲೆ ದಳ ಕಳೆದ ವರ್ಷ ಬಿಡುಗಡೆ ಮಾಡಿದ ವರದಿಯಲ್ಲಿ, ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಶೇಕಡಾ 95 ಮಂದಿಗೆ ಅಪರಾಧಿಗಳು ಯಾರೆಂದು ಗೊತ್ತಿರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ದೇಶದ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಚಿತರ ಪ್ರಮಾಣ ಇಷ್ಟಿದ್ದರೆ, ಇನ್ನು 4 ರಾಜ್ಯಗಳಲ್ಲಿ ಶೇಕಡಾ 99ರಷ್ಟಿದೆ.
ದಾಖಲೆಗಳ ಪ್ರಕಾರ, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಿನವು ನೆರೆಹೊರೆಯವರಿಂದ ಆಗುತ್ತವೆ.ಅದರ ಪ್ರಮಾಣ ಶೇಕಡಾ 37.78ರಷ್ಟು. ಶೇಕಡಾ 6.60ರಷ್ಟು ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಂದ ಆದರೆ, ತಾತ, ತಂದೆ ಮತ್ತು ಸೋದರರಿಂದ ಶೇಕಡಾ 1.56ರಷ್ಟಾಗುತ್ತದೆ. ಮಕ್ಕಳ ಪೋಷಕರು ಅಥವಾ ಕುಟುಂಬ ಸದಸ್ಯರ ಜೊತೆ ಕೆಲಸ ಮಾಡುವ ಮಾಲಿಕರು ಮತ್ತು ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರಕ್ಕೆ ಮಕ್ಕಳು ಒಳಗಾಗುತ್ತಾರೆ. ಶೇಕಡಾ 5.20ರಷ್ಟು ಮಾತ್ರ ಅಪರಿಚಿತ ವ್ಯಕ್ತಿಗಳಿಂದ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ದಾಖಲೆ ಹೇಳುತ್ತವೆ.
ದೇಶದಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೈಂಗಿಕ ಅತ್ಯಾಚಾರ ಪ್ರಕರಣಗಳು ಸಾವಿರದ 440 ದಾಖಲಾಗಿದ್ದು, ಗೋವಾ, ಹಿಮಾಚಲ ಪ್ರದೇಶ, ಪಂಜಾಬ್, ತ್ರಿಪುರಾ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಒಂದೇ ಒಂದು ಅತ್ಯಾಚಾರ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಮಹಾರಾಷ್ಟ್ರ, ಒಡಿಶಾ, ಬಿಹಾರಗಳಲ್ಲಿ ಕ್ರಮವಾಗಿ 3,2 ಮತ್ತು 42 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆ ದಳದ ಪ್ರಕಾರ, ಕರ್ನಾಟಕ, ಸಿಕ್ಕಿಂ ಮತ್ತು ತಮಿಳು ನಾಡಿನಲ್ಲಿ ವಯಸ್ಕ ಅತ್ಯಾಚಾರ ಪ್ರಕರಣಗಳಿಗಿಂತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ನಡೆದಿರುವುದು ಹೆಚ್ಚು. ಸಿಕ್ಕಿಂನಲ್ಲಿ ಉದಾಹರಣೆಗೆ ಮಹಿಳೆ, ಯುವತಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳು ಕೇವಲ 39, ಅದೇ ಮಕ್ಕಳ ಮೇಲೆ 39 ಆಗಿದೆ. ಪುದುಚೆರಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾದ ಕೇಸುಗಳು ಮೂರು ಆದರೆ, ಮಕ್ಕಳ ಮೇಲೆ 27 ಆಗಿದೆ. ಕೇಂದ್ರಾಡಳಿತ ಪ್ರದೇಶಗಳಾದ ಡಿಯೊ, ಹವೇಲಿಯಲ್ಲಿ ಕೂಡ ಈ ಸಂಖ್ಯೆ ಇಷ್ಟೇ ಆಗಿದೆ.
ಕರ್ನಾಟಕದಲ್ಲಿ 2015ರಲ್ಲಿ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಸಾವಿರದ 73. ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು 589. ತಮಿಳು ನಾಡಿನಲ್ಲಿ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಾವಿರದ 73 ಆದರೆ ವಯಸ್ಕರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು 421.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ