ದೇಶ

ಹಾರ್ಟ್ ಆಪ್ ಏಷಿಯಾ ಸಮ್ಮೇಳನ ಪ್ರಾರಂಭ; ಭಯೋತ್ಪಾದನೆ ಕಡಿವಾಣಕ್ಕೆ ಒತ್ತು

Vishwanath S
ಅಮೃತಸರ: ಹಾರ್ಟ್ ಆಪ್ ಏಷಿಯಾ ಸಮ್ಮೇಳನ ಪ್ರಾರಂಭವಾಗಿದ್ದು ಇದರಲ್ಲಿ ಜಗತ್ತಿನ 40 ದೇಶಗಳು ಭಾಗಿಯಾಗಿವೆ. ಈ ಭಾರಿಯ ಸಮ್ಮೇಳನದಲ್ಲಿ ಭಯೋತ್ಪಾದನೆ ಕಡಿವಾಣಕ್ಕೆ ಒತ್ತು ನೀಡಲಾಗಿದೆ.
ಈ ಭಾರಿ ತಾಲಿಬಾನ್ ಉಗ್ರರ ಕಪಿಮುಷ್ಠಿಯಿಂದ ನಲುಗುತ್ತಿರುವ ಆಫ್ಗಾನಿಸ್ತಾನಕ್ಕೆ ಸ್ಥೈರ್ಯ ತುಂಬುವ ಕಾರ್ಯಗಳು ನಡೆಯಲಿವೆ. ವಾರ್ಷಿಕ ಸಮ್ಮೇಳನದಲ್ಲಿ ಯೂರೋಪಿನ್ ಯೂನಿಯನ್ ನ ಹಲವು ರಾಷ್ಟ್ರಗಳು ಭಾಗಿಯಾಗಿದ್ದು ಇದರಲ್ಲಿ ಭಯೋತ್ಪಾದನೆ ಕಡಿವಾಣಕ್ಕೆ ಒತ್ತು ನೀಡಲಾಗುತ್ತಿದೆ. 
14 ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಭಾರತ, ಚೀನಾ, ರಷ್ಯಾ, ಇರಾನ್ ಮತ್ತು ಪಾಕಿಸ್ತಾನ ಮತ್ತು 17 ಪೋಷಕ ರಾಷ್ಟ್ರಗಳು ತಮ್ಮ ರಾಷ್ಟ್ರದಲ್ಲಿ ತಲೆದೊರಿರುವ ಭಯೋತ್ಪಾದನೆ ಕುರಿತಾದ ವಿಚಾರವನ್ನು ಪ್ರಸ್ತುತ ಪಡಿಸುತ್ತಿದ್ದು,  ಭಯೋತ್ಪಾದನೆ ವಿರುದ್ಧ ಹೋರಾಟದ ಕುರಿತಾದ ಮಹತ್ವ ವಿಷಯಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿವೆ. 
ದಕ್ಷಿಣ ಮತ್ತು ಕೇಂದ್ರ ಏಷಿಯಾ ರಾಷ್ಟ್ರಗಳಿಗೆ ಅಫ್ಘಾನಿಸ್ತಾನವನ್ನು ಸಂಪರ್ಕಿಸುವುದು ಮತ್ತು ಮಹತ್ವ ವಿಚಾರಗಳನ್ನು ಕುರಿತು ಇನ್ನಿತರ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿವೆ. ಭಾರತದ ನೇತೃತ್ವದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಮತ್ತು ಆಫ್ಘಾನಿಸ್ಥಾನದ ಉಪ ವಿದೇಶಾಂಗ ಸಚಿವ ಹಿಕ್ಮತ್ ಕಲೀಲ್ ಕರ್ಜೈ ಭಾಗಿಯಾಗಲಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಜಂಟಿಯಾಗಿ ಸಚಿವರ ಸಮ್ಮೇಳನವನ್ನು ನಾಳೆ ಉದ್ಘಾಟಿಸಲಿದ್ದು ಪಾಕಿಸ್ತಾನ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಪ್ರತಿನಿಧಿಸಲಿದ್ದಾರೆ. 
ನಗ್ರಾಟೋ ಸೇನಾ ಶಿಬಿರದ ಮೇಲಿನ ದಾಳಿ ಮತ್ತು ಗಡಿಯಲ್ಲಿ ಉಗ್ರರು ನಡೆಸುತ್ತಿರುವ ವಿದ್ವಂಸಕ ಕೃತ್ಯಗಳಿಂದಾಗಿ ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆ ಕ್ಷೀಣವಾಗಿದೆ. 
SCROLL FOR NEXT