ಪಣಜಿ: ಡಿಜಿಟಲ್ ಇಂಡಿಯಾ ಯೋಜನೆಯಡಿ ಗೋವಾ ರಾಜ್ಯ ಸರ್ಕಾರ ಯುವ ಸಂಚಾರ್ ಯೋಜನೆಗೆ ಸೋಮವಾರ ಚಾಲನೆ ನೀಡಲಿದೆ.
ಯುವ ಸಂಚಾರ್ ಯೋಜನೆಯಡಿಯಲ್ಲಿ ಯುವಜನತೆಗೆ ಉಚಿತ ಸಿಮ್ ಕಾರ್ಡ್, 3 ಜಿಬಿ ಇಂಟರ್ನೆಟ್ ಡಾಟಾ ಮತ್ತು 100 ನಿಮಿಷಗಳ ಉಚಿತ ಕರೆಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೇಳಿದ್ದಾರೆ.
ಖಾಸಗಿ ಮೊಬೈಲ್ ಸಂಸ್ಥೆ ವೊಡಾಫೋನ್ ಜತೆ ರಾಜ್ಯ ಸರ್ಕಾರ ಕೈಜೋಡಿಸಿದ್ದು, ಈ ಯೋಜನೆಯಡಿ ಸರಿ ಸುಮಾರು 1.25 ಲಕ್ಷ ಯುವಜನತೆಗೆ ಸಹಾಯಕವಾಗಲಿದೆ ಎಂದು ಪರ್ಸೇಕರ್ ಹೇಳಿದ್ದಾರೆ.
ಯುವಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು ಒಂದು ವೇಳೆ ಇದನ್ನು ಫಲಾನುಭವಿಗಳು ದುರ್ಬಳಕೆ ಮಾಡಿಕೊಂಡರೆ ಯೋಜನೆಗಳನ್ನು ಸ್ಧಗಿತಗೊಳಿಸಲಾಗುವುದು ಎಂದು ಸಿಎಂ ಎಚ್ಚರಿಕೆಯನ್ನೂ ನೀಡಿದ್ದಾರೆ.