ದೇಶ

ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ಬೇಷರತ್ ಬೆಂಬಲ ನೀಡಿದೆ: ಅಶ್ರಫ್ ಘನಿ

Srinivas Rao BV
ಅಮೃತ್ ಸರ: ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಭಾರತ ತಮ್ಮ ದೇಶದ ಅಭಿವೃದ್ಧಿಗೆ ಬೇಷರತ್ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ. 
ಭಾರತ-ಅಪ್ಘಾನಿಸ್ತಾನ-ಇರಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಾಬಹಾರ್ ಬಂದರು ಯೋಜನೆಯ ಬಗ್ಗೆಯೂ ಮಾತನಾಡಿರುವ ಅಶ್ರಫ್ ಘನಿ, ಚಾಬಹಾರ್ ಬಂದರು ಪ್ರಾದೇಶಿಕ ವಾಣಿಜ್ಯ ವಹಿವಾಟು ಹಾಗೂ ಸಂಪರ್ಕದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. 
ಸಲ್ಮಾ ಜಲಾಶಯ ನಿರ್ಮಾಣಕ್ಕೆ ಭಾರತದ ಕೊಡುಗೆಯನ್ನು ಸ್ಮರಿಸಿರುವ ಅಶ್ರಫ್ ಘನಿ, 2016 ರ ಜೂನ್ ನಲ್ಲಿ ಪ್ರಧಾನಿ ಮೋದಿ ಅಪ್ಘಾನಿಸ್ತಾನ-ಭಾರತ ಸ್ನೇಹದ ಸಂಕೇತವಾಗಿರುವ ಜಲಾಶಯವನ್ನು ಉದ್ಘಾಟಿಸಿದ್ದನ್ನು ನೆನೆದಿದ್ದಾರೆ. ಅಪ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ನೀಡುತ್ತಿರುವ ಸಹಕಾರ, ಬೆಂಬಲ ಪಾರದರ್ಶಕವಾಗಿದ್ದು ಯಾವುದೇ ಷರತ್ತುಗಳಿಲ್ಲ ಎಂದು ಅಶ್ರಫ್ ಘನಿ ತಿಳಿಸಿದ್ದಾರೆ. 
SCROLL FOR NEXT