ದೇಶ

ಪಶ್ಚಿಮ ಬಂಗಾಳದಲ್ಲಿ ಸೇನೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ: ಮಮತಾ ಬ್ಯಾನರ್ಜಿ ವಿರುದ್ಧ ಪರಿಕ್ಕರ್ ಆಕ್ರೋಶ

Shilpa D

ಪಣಜಿ: ಸೇನಾ ಪಡೆ ವಿಷಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪಿಸಿದ್ದಾರೆ.

ರಾಜ್ಯದ ಟೋಲ್ ಪ್ಲಾಜಾಗಳಿಗೆ ನಿಯೋಜನೆಗೊಂಡಿರುವ ಸೇನೆ ರಸ್ತೆಯ ಸಾಮರ್ಥ್ಯವನ್ನು ಪರಿಶೀಲಿಸುತ್ತಿದೆ.ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ಸೇನಾ ಪಡೆ ರಸ್ತೆಗಳ ಸಾಮರ್ಥಯ ಪರಿಶೀಲಿಸಲು ಸಮೀಕ್ಷೆ ಕಾರ್ಯ ನಡೆಸುತ್ತದೆ. ಅದು ಅವರ ದೈನಂದಿನ ಕರ್ತವ್ಯವೂ ಹೌದು, ಆದರೆ ಇದನ್ನು ಮುಖ್ಯಮಂತ್ರಿಗಳು ಬೇರೆಯದ್ದೇ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೆಸರು ಹೇಳದೇ ಪರಿಕ್ಕರ್ ಹರಿಹಾಯ್ದರು.

ಗೋವಾದಲ್ಲಿ ನಡೆದ ವಿಜಯ್ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿದ ಪರಿಕ್ಕರ್, ಪ್ರತಿವರ್ಷ ರಸ್ತೆ ಸಾಮರ್ಥ್ಯದ ಪರಿಶೀಲನೆ ಹಾಗೂ ಸಂಚರಿಸುವ ವಾಹನಗಳ ಬಗ್ಗೆ ಸೇನೆ ಸಮೀಕ್ಷೆ ನಡೆಸುತ್ತದೆ. ಇದು ಹೊಸತೇನಲ್ಲ ಎಂದು ಅವರು ತಿಳಿಸಿದರು.

SCROLL FOR NEXT