ದೇಶ

ಜಯಲಲಿತಾ ಅನಾರೋಗ್ಯ: ಐಐಟಿ ಮದ್ರಾಸ್ ಗೆ ಭೇಟಿ ನೀಡಲು ಹಿಂಜರಿಯುತ್ತಿರುವ ಕಂಪೆನಿಗಳು

Sumana Upadhyaya
ಚೆನ್ನೈ: ಕಳೆದ ವರ್ಷ ನೆರೆ ಪ್ರವಾಹವಾದರೆ ಈ ವರ್ಷ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಹದಗೆಟ್ಟಿರುವುದು ಮದ್ರಾಸ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ಯಾಂಪಸ್ ನಿಯೋಜನೆ ಮೇಲೆ ಪರಿಣಾಮ ಉಂಟುಮಾಡಿದೆ.
ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಭೀತಿ ಉಂಟಾಗಿರುವುದರಿಂದ, ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವುದರಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅನೇಕ ಕಂಪೆನಿಗಳು ಅಲ್ಲಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿವೆ.
ಅನೇಕ ಕಂಪೆನಿಗಳು ದೂರವಾಣಿ ಮೂಲಕ ಕರೆ ಮಾಡಿ ಇಲ್ಲಿನ ಪರಿಸ್ಥಿತಿ ಬಗ್ಗೆ ಕೇಳುತ್ತಿದ್ದಾರೆ. ತೊಂದರೆ ಕಡಿಮೆಯಿದ್ದು ಇಲ್ಲಿನ ಪರಿಸ್ಥಿತಿ ಬಗ್ಗೆ ಸರಿಯಾದ ಮಾಹಿತಿ, ಸ್ಪಷ್ಟತೆಯಿಲ್ಲ. ಅನೇಕ ವದಂತಿಗಳು ಹಬ್ಬುತ್ತಿವೆ, ಹೀಗಾಗಿ ನೇಮಕಾತಿ ಮಾಡುವ ಕಂಪೆನಿಗಳಿಗೆ ಗೊಂದಲ, ಆತಂಕವುಂಟಾಗಿದೆ ಎಂದು ಐಐಟಿ ಮದ್ರಾಸ್ ನ ತರಬೇತಿ ಮತ್ತು ನಿಯೋಜನೆ ಘಟಕದ ಸಲಹೆಗಾರ ಶಾಂತನಮ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಇಂದು ಕ್ಯಾಂಪಸ್ ಗೆ ಭೇಟಿ ನೀಡಬೇಕಾಗಿದ್ದ ಹಲವು ಕಂಪೆನಿಗಳು ಹಿಂದೆ ಸರಿದಿವೆ ಎಂದು ಅವರು ಹೇಳಿದರು.
ಇದುವರೆಗೆ ಐಐಟಿ ಮದ್ರಾಸ್ ನ ಸುಮಾರು 400 ವಿದ್ಯಾರ್ಥಿಗಳಿಗೆ ವಿವಿಧ ಕಂಪೆನಿಗಳಲ್ಲಿ ನಿಯೋಜನೆಯಾಗಿದ್ದು 900ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇಮಕಾತಿಯಾಗಬೇಕಿದೆ. ಸರಾಸರಿ ದಿನಕ್ಕೆ 100 ವಿದ್ಯಾರ್ಥಿಗಳು ನೇಮಕಾತಿಯಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ಅಲ್ಲಿ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ.
SCROLL FOR NEXT