ಜಯಲಲಿತಾ 
ದೇಶ

ಜಯಲಲಿತಾ ಆಸ್ಪತ್ರೆಗೆ ದಾಖಲಾದ 73 ದಿನಗಳಲ್ಲಿ ನಡೆದ ಘಟನಾವಳಿಗಳು

ಕಳೆದ 73 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸಿಎಂ ಜಯಲಲಿತಾ ಡಿಸೆಂಬರ್ 5 ರ ಮಧ್ಯರಾತ್ರಿ ...

ಚೆನ್ನೈ: ಕಳೆದ 73 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸಿಎಂ ಜಯಲಲಿತಾ ಡಿಸೆಂಬರ್ 5 ರ ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಕಳೆದು ಎರಡು ತಿಂಗಳಿಂದ ಅಪೋಲೋ ಆಸ್ಪತ್ರೆಯಲ್ಲಿ  ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಡಿಸೆಂಬರ್ 4 ರಂದು ಜಯಲಲಿತಾಗೆ ಹೃದಯ ಸ್ಥಂಭನವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 5 ರ ಮಧ್ಯರಾತ್ರಿ ಸುಮಾರು 11.30ಕ್ಕೆ ಜಯಲಲಿತಾ ವಿಧಿವಶರಾಗಿದ್ದರು.

ಸೆಪ್ಟಂಬರ್ 22 ರಂದು ಜ್ವರ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಜಯಲಲಿತಾ ನಿಧನದ ವರೆಗೆ ಅಂದರೆ ಡಿಸೆಂಬರ್ 5 ರ ವರೆಗಿನ ಘಟಾನಾವಳಿಗಳ ವಿವರ ಇಲ್ಲಿದೆ.
ಸೆಪ್ಪಂಬರ್ 23: ತಮಿಳುನಾಡು ಸಿಎಂ ಜಯಲಲಿತಾ ಅಪೋಲೊ ಆಸ್ಪತ್ರೆಗೆ ದಾಖಲು

ಸೆಪ್ಪಂಬರ್ 24: ಜಯ ಆರೋಗ್ಯ ಸ್ಥಿತಿ ಸುಧಾರಣೆ, ನಿಗಾ ವಹಿಸಲಾಗಿದೆ ಅಪೋಲೊ ಆಸ್ಪತ್ರೆ.

ಸೆಪ್ಪಂಬರ್ 25: ಜಯಲಲಿತಾ ಅವರ ಆರೋಗ್ಯದಲ್ಲಿ ಚೇತರಿಕೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆ: ಅಪೊಲೋ ಆಸ್ಪತ್ರೆ

ಸೆಪ್ಪಂಬರ್30:
ಮತ್ತಷ್ಟು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸುವಂತೆ ಅಪೊಲೋ ಆಸ್ಪತ್ರೆ ವೈದ್ಯರ ಹೇಳಿಕೆ

ಅಕ್ಟೋಬರ್ 1 : ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಿಂದ ಜಯಲಲಿತಾ ಆರೋಗ್ಯ ವಿಚಾರಣೆ
ಅಕ್ಟೋಬರ್ 2: ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆ, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಎಐಎಡಿಎಂಕೆ

ಅಕ್ಟೋಬರ್ 5
: ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆ, ಅಪೋಲೊ ಆಸ್ಪತ್ರೆ ವೈದ್ಯರು

ಅಕ್ಟೋಬರ್ 6: ಜಯಲಲಿತಾ ಆರೋಗ್ಯದ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಅಕ್ಟೋಬರ್ 12
: ಜಯಲಲಿತಾ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸಿದ್ದವರ ವಿರುದ್ಧ 43 ಕೇಸು ದಾಖಲು, ಇಬ್ಬರ ಬಂಧನ

ಅಕ್ಟೋಬರ್ 16
: ಜಯಲಲಿತಾ ಅರೋಗ್ಯದ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದ ಪೂಜಾರಿ ಬಂಧನ

ಅಕ್ಟೋಬರ್ 17:
ಜಯಲಲಿತಾ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ 22 ಮಂದಿ ವಿರುದ್ಧ ಪ್ರಕರಣ ದಾಖಲು.

ಅಕ್ಟೋಬರ್ 22:
ಮತ್ತೆ ತಮಿಳುನಾಡು ರಾಜ್ಯಪಾಲರಿಂದ ಜಯಾ ಆರೋಗ್ಯದ ಬಗ್ಗೆ ಮಾಹಿತಿ

ನವೆಂಬರ್ 4:
ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದಾರೆ. ಶೀಘ್ರವೇ ಅಸ್ಪತ್ರೆಯಿಂದ ಬಿಡುಗಡೆಗೊಳಿಸುವುದಾಗಿ ಅಪೋಲೋ ಆಸ್ಪತ್ರೆ ಚೇರ್ ಮನ್ ಪ್ರತಾಪ್ ರೆಡ್ಡಿ ಹೇಳಿಕೆ.

ನವೆಂಬರ್ 8: ಸ್ಥಳೀಯ ಚುನಾವಣೆ ಪ್ರಕ್ರಿಯೆಗಳಿಗಾಗಿ ಜಯಲಲಿತಾ ಹೆಬ್ಬೆಟ್ಟು ಸಹಿ ಮಾಡಿಸಿಕೊಂಡಿದ್ದರ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಅನ್ನು ಮದ್ರಾಸ್ ಹೈಕೋರ್ಟ್ ವಜಾ ಗೊಳಿಸಿತ್ತು.

ನವೆಂಬರ್ 23:
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಸಾಧಿಸಿದ್ದಕ್ಕೆ ಆಸ್ಪತ್ರೆಯಿಂದಲೇ ಜನತೆಗೆ ಧನ್ಯವಾದ ಹೇಳಿದ ಜಯಲಲಿತಾ.

ಡಿಸೆಂಬರ್ 5:
ಡಿಸೆಂಬರ್ 4 ರಂದು ರಾತ್ರಿ ಸುಮಾರು 9.30ಕ್ಕೆ ಜಯಲಲಿತಾರಿಗೆ ಕಾರ್ಡಿಯಾಕ್ ಆರೆಸ್ಟ್ ಎಂದು ಆಸ್ಪತ್ರೆ ಪ್ರಕಟಣೆ. ಡಿಸೆಂಬರ್ 5 ಚಿಕಿತ್ಸೆ ಫಲಿಸದೇ ಜಯಲಲಿತಾ ನಿಧನ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ