ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ನೋಟು ನಿಷೇಧ: ಅನಾನುಕೂಲತೆ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ- ಅರುಣ್ ಜೇಟ್ಲಿ

ಸಂಸತ್ತಿನಲ್ಲಿ ಕಲಾಪ ಆರಂಭವಾಗಿ ಮೂರು ವಾರ ಕಳೆದರೂ ನೋಟು ನಿಷೇಧ ನಿರ್ಧಾರ ಹಿಡಿದು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು...

ನವದೆಹಲಿ: ಸಂಸತ್ತಿನಲ್ಲಿ ಕಲಾಪ ಆರಂಭವಾಗಿ ಮೂರು ವಾರ ಕಳೆದರೂ ನೋಟು ನಿಷೇಧ ನಿರ್ಧಾರ ಹಿಡಿದು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಗುರುವಾರ ಕಿಡಿಕಾರಿದ್ದಾರೆ.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ನೋಟು ನಿಷೇಧ ಕುರಿತಂತೆ ವಿರೋಧ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದವು. ಈ ವೇಳೆ ಮಾತನಾಡಿದ ಜೇಟ್ಲಿಯವರು, ನೋಟು ನಿಷೇಧದಿಂದ ಎದುರಾಗಿರುವ ಅನಾನುಕೂಲತೆ ಕಡಿಮೆ ಮಾಡಲು ಸರ್ಕಾರ ಎಲ್ಲಾ ರೀತಿಯ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ ಸರ್ಕಾರ 2004-14ರ ಅವಧಿಯವರೆಗೂ ದೇಶದಲ್ಲಿ ಅಧಿಕಾರ ನಡೆಸಿತ್ತು. ಅಂದರೆ, 10 ವರ್ಷಗಳ ಕಾಲ ಆಡಳಿತ ನಡೆಸಿತ್ತು. 10 ವರ್ಷದ ಆಡಳಿತಾವಧಿಯಲ್ಲಿ ಕಪ್ಪುಹಣದ ವಿರುದ್ಧ ಯಾವುದಾದರೂ ಒಂದು ನಿರ್ಧಾರವನ್ನಾಗಲಿ, ಕ್ರಮವನ್ನಾಗಲೀ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಟಿ ಜಯಮಾಲ, ಸಾ.ರಾ.ಗೋವಿಂದಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ; ಎಂ.ಎಸ್ ಸತ್ಯುಗೆ ಪುಟ್ಟಣ್ಣ ಕಣಗಾಲ್ ಅವಾರ್ಡ್

I-PAC raids: ಸಿಎಂ ಮಮತಾರಿಂದ ತನಿಖೆಗೆ 'ಅಡ್ಡಿ'; ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದ ED

ರಾಜ್ಯಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

Toxic Teaser: ಕಾರಿನಲ್ಲಿ ಯಶ್ ಜೊತೆ ಮಿಸ್ಟರಿ ವುಮನ್? ಸಂಚಲನ ಸೃಷ್ಟಿಸಿದ ಹಾಲಿವುಡ್ ಬೆಡಗಿ ಇವರೇ!

SCROLL FOR NEXT