ದೇಶ

ಡಿ.10ರ ನಂತರ ಬಸ್, ರೈಲ್ವೆ ಹಾಗೂ ಮೆಟ್ರೊದಲ್ಲೂ ಹಳೇ 500ರ ನೋಟು ಸ್ವೀಕಾರ ಇಲ್ಲ

Lingaraj Badiger
ನವದೆಹಲಿ: ಹಳೆ 500 ರುಪಾಯಿಯನ್ನು ಮೆಟ್ರೊ, ರೈಲು ಹಾಗೂ ಬಸ್ ಟಿಕೆಟ್ ಗಾಗಿ ಡಿಸೆಂಬರ್ 10ರವರೆಗೆ ಮಾತ್ರ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ನೋಟ್ ಬದಲಾವಣೆಯನ್ನು ಸ್ಥಗಿತಗೊಳಿಸಿದ್ದ ಕೇಂದ್ರ ಹಣಕಾಸು ಸಚಿವಾಲಯ, ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಆಸ್ಪತ್ರೆ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ರುಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡಿತ್ತು. ಆದರೆ ಇದೀಗ ಐದು ದಿನ ಕಡಿತಗೊಳಿಸಿ ಡಿಸೆಂಬರ್ 10ಕ್ಕೆ ಅಂತ್ಯಗೊಳಿಸಿದೆ.
ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ, ವಿದ್ಯುತ್ ಹಾಗೂ ನೀರಿನ ಬಿಲ್ ಕಟ್ಟಲು ನೀಡಿದ್ದ ಅವಕಾಶವನ್ನು ಎರಡು ಬಾರಿ ವಿಸ್ತರಿಸಿತ್ತು.
ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಡಲಾಗಿತ್ತು.
SCROLL FOR NEXT