ಪಾಟ್ನಾ: ಬಿಹಾರ ಟಾಪರ್ ಹಗರಣದ ಪ್ರಮುಖ ಆರೋಪಿ ದಿವಾಕರ್ ಪ್ರಸಾದ್ ಶವವಾಗಿ ಪತ್ತೆಯಾಗಿದ್ದಾರೆ.
ಬಿಹಾರದ 12 ನೇತರಗತಿಯ ಕಲಾ ವಿಭಾಗದಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ವಿಷಯ ಎಂದು ಹೇಳಿಕೆ ನೀಡಿದ್ದಳು. ಹೀಗಾಗಿ ಪಿಯು ಪರೀಕ್ಷಾ ಮಂಡಳಿ 14 ಟಾಪರ್ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಎಂಬುವರು ಅನುತ್ತೀರ್ಣರಾಗಿದ್ದರು.
ಖಾಸಗಿ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರುಬಿ ರಾಯ್ ಸಿಕ್ಕಿಬಿದ್ದಿದ್ದಳು. ಹಣ ನೀಡಿ ವಂಚಿಸಿ ರ್ಯಾಂಕ್ ತೆಗೆದುಕೊಂಡಿದ್ದಾರೆ ಎಂದು ಕುಟುಕು ಕಾರ್ಯಾಚರಣೆಯಲ್ಲಿ ಹೇಳಲಾಗಿತ್ತು. ನಂತರ ಈ ಸಂಬಂಧ ತನಿಖೆ ನಡೆಸಿದಾಗ ಟಾಪರ್ ಗಳು 20 ಲಕ್ಷ ರು ನೀಡಿ ಅಂಕ ಪಡೆದಿದ್ದು ಬಹಿರಂಗವಾಗಿತ್ತು.