ನರೇಂದ್ರ ಮೋದಿ ಮತ್ತು ಅಮಿತ್ ಶಾ 
ದೇಶ

ನರೇಂದ್ರ ಮೋದಿ, ಅಮಿತ್ ಶಾ ತಲೆ ಕತ್ತರಿಸಿದವರಿಗೆ ಬಹುಮಾನ: ಎಸ್ ಪಿ ಮುಖಂಡನ ವಿಡಿಯೋ ವೈರಲ್

ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಶಿರಚ್ಛೇದ ಮಾಡಿದರೇ ಬಹುಮಾನ ನೀಡುವುದಾಗಿ ಸಮಾಜವಾದಿ ಪಕ್ಷದ ...

ಆಗ್ರಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಶಿರಚ್ಛೇದ ಮಾಡಿದರೇ ಬಹುಮಾನ ನೀಡುವುದಾಗಿ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷದ ಬಾಗ್‌ಪತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ತರುಣ್ ದೇವ್ ಯಾದವ್, ಪ್ರಧಾನಿ ಮೋದಿ, ಅಮಿತ್ ಶಾ ದೇಶದಲ್ಲಿ ತುರ್ತು ಪರಿಸ್ಥಿತಿ ತಲೆದೋರುವಂತೆ ಮಾಡಿದ್ದಾರೆ. ಗೋಧ್ರಾ ಹಿಂಸಾಚಾರಕ್ಕೂ ಇಬ್ಬರು ಹೊಣೆಯಾಗಿದ್ದಾರೆ, ಅವರಿಬ್ಬರನ್ನು ಶಿರಚ್ಛೇದಗೈದರೆ ಸೂಕ್ತ ಬಹುಮಾನ ನೀಡುವುದಾಗಿ ತಮ್ಮ ಲೆಟರ್‌ ಹೆಡ್‌ ಇರೋ ಪತ್ರದಲ್ಲಿ  ತಿಳಿಸಿದ್ದಾರೆ.

ತಮ್ಮದೇ ಕೈಬರಹದ ಪತ್ರದಲ್ಲಿ ತರುಣ್ ದೇವ್ ಯಾದವ್‌ ಕಿರಿಯರಿಂದ ವಯೋವೃದ್ಧರವರೆಗೆ ದುಡ್ಡಿಗಾಗಿ ಬ್ಯಾಂಕ್ ಎಟಿಎಂಗಳ ಬಳಿ ಕ್ಯೂ ನಿಂತು ಅನುಭವಿಸುತ್ತಿರುವ ಕಷ್ಟದ ಕುರಿತು ಗಮನ ಸೆಳೆದಿದ್ದಾರೆ. ಸಮಾಜವಾದಿ ಪಕ್ಷದ ಸಭೆಯೊಂದರಲ್ಲಿ ಯಾದವ್‌ ಈ ಪತ್ರವನ್ನು ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತರುಣ್ ದೇವ್‌ರ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷ ಖಂಡಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಹೇಯವಾದ ಹೇಳಿಕೆ ನೀಡಿರುವ ತರುಣ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಪಕ್ಷದ ವಕ್ತಾರ ಮೊಹಮದ್ ಶಾಹಿದ್ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ 'ಪಕ್ಷದ ಎಲ್ಲ ಜಿಲ್ಲಾ ಘಟಕಗಳನ್ನು ವಜಾಗೊಳಿಸಿದ್ದು, ತರುಣ್ ಯಾದವ್ ಸದ್ಯ ಭಾಗಪತ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಇಲ್ಲ' ಎಂದಿದ್ದಾರೆ. ಆದರೆ  ತರುಣ್ ಯಾದವ್ ರಿಲೀಸ್ ಮಾಡಿರೋ ಪತ್ರದಲ್ಲಿ ಯುವಜನ ಸಮಾಜವಾದಿ ಪಕ್ಷದ ಭಾಗಪತ್‌ ಜಿಲ್ಲಾಧ್ಯಕ್ಷ ಎಂದೇ ಇದೆ. ಈ ವಿಡಿಯೋವನ್ನು ಡಿಸೆಂಬರ್ 7 ರಂದು ಬಿಡುಗಡೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ