ವೆಂಕಯ್ಯ ನಾಯ್ಡು 
ದೇಶ

ರಾಹುಲ್ ಗಾಂಧಿ ಭಾಷಣದ ಕಂಪನಕ್ಕೆ 440 ರಿಂದ 44 ಕ್ಕೆ ಕುಸಿದ ಕಾಂಗ್ರೆಸ್: ವೆಂಕಯ್ಯ ನಾಯ್ಡು ವ್ಯಂಗ್ಯ

ರಾಹುಲ್ ಭಾಷಣದಿಂದ ಉಂಟಾದ ಕಂಪನಕ್ಕೆ ಕಾಂಗ್ರೆಸ್ ನ ಸಂಖ್ಯೆ ಲೋಕಸಭೆಯಲ್ಲಿ 440 ರಿಂದ 44 ಕ್ಕೆ ಕುಸಿದಿದೆ ಎಂದು ವ್ಯಂಗ್ಯವಾಡಿದ್ದಾರೆ.

ನವದೆಹಲಿ: "ನಾನು ಸಂಸತ್ ನಲ್ಲಿ ಮಾತನಾಡಿದರೆ ಭೂಕಂಪ ಸಂಭವಿಸುತ್ತದೆ ಎಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕಳೆದ ಬಾರಿ ರಾಹುಲ್ ಭಾಷಣದಿಂದ ಉಂಟಾದ ಕಂಪನಕ್ಕೆ ಕಾಂಗ್ರೆಸ್ ನ ಸಂಖ್ಯೆ ಲೋಕಸಭೆಯಲ್ಲಿ 440 ರಿಂದ 44 ಕ್ಕೆ ಕುಸಿದಿದೆ ಎಂದು ವ್ಯಂಗ್ಯವಾಡಿದ್ದಾರೆ.  
500, 1000 ರೂ ಮುಖಬೆಲೆಯ ನೋಟು ಅಮಾನ್ಯ ಘೋಷಣೆಯ ಬಗ್ಗೆ ಸಂಸತ್ ನಲ್ಲಿ ವಿಸ್ತೃತ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅಷ್ಟೇ ಅಲ್ಲದೇ ಈಗಾಗಲೇ ಸಂಸತ್ ನಲ್ಲಿ ಚರ್ಚೆಯನ್ನೂ ಪ್ರಾರಂಭಿಸಲಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವರು ಕೇಂದ್ರ ಸರ್ಕಾರದ ಘೋಷಣೆ ಬಗ್ಗೆ ಮಾತನಾಡಿದ್ದಾರೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. 
ಸಂಸತ್ ಚರ್ಚೆ ನಡೆಸಲು ಇರುವ ಅತ್ಯುತ್ತಮ ವೇದಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಹೇಳುವುದನ್ನು ಆಲಿಸಿ ಪ್ರತಿಪಕ್ಷಗಳು ಏನು ಹೇಳಬೇಕೋ ಅದನ್ನು ಹೇಳಲಿ ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ರಾಹುಲ್ ಗಾಂಧಿ ತಮ್ಮ ಹೇಳಿಕೆ ಮೂಲಕ ಯಾವ ಸಂದೇಶ ರವಾನೆ ಮಾಡಲು ಬಯಸುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿ ರಾಹುಲ್ ಭಾಷಣದಿಂದ ಉಂಟಾದ ಕಂಪನಕ್ಕೆ ಕಾಂಗ್ರೆಸ್ ನ ಸಂಖ್ಯೆ ಲೋಕಸಭೆಯಲ್ಲಿ 440 ರಿಂದ 44 ಕ್ಕೆ ಕುಸಿದಿದೆ ಎಂದು ವ್ಯಂಗ್ಯವಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್