ದೇಶ

ಪಂಜಾಬ್ ನಲ್ಲಿ ಪ್ರಚಾರ ಮಾಡುವಂತೆ ಪ್ರಿಯಾಂಕ ಗಾಂಧಿಗೆ ಮನವಿ ಮಾಡುತ್ತೇವೆ: ಅಮರಿಂದರ್ ಸಿಂಗ್

Lingaraj Badiger
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ  ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳುವಂತೆ ಪ್ರಿಯಾಂಕ ಗಾಂಧಿ ಅವರಿಗೆ ಮನವಿ ಮಾಡುವುದಾಗಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಪಂಜಾಬ್ ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಅವರೊಂದಿಗೆ ಪ್ರಿಯಾಂಕ ಗಾಂಧಿ ಅವರಿಗೂ ಪ್ರಚಾರ ಮಾಡುವಂತೆ ಮನವಿ ಮಾಡಲಾಗುವುದು ಎಂದು ಅಮರಿಂದರ್ ಸಿಂಗ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಪಂಜಾಬ್ ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ದಲಿತರೊಬ್ಬರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅಮರಿಂದರ್ ಸಿಂಗ್ ಅವರು, ದೆಹಲಿ ಆಪ್ ಸರ್ಕಾರದಲ್ಲಿ ಒಬ್ಬ ಸಿಖ್ ಅಥವಾ ದಲಿತರಿಗೆ ಸ್ಥಾನ ನೀಡಿಲ್ಲ ಎಂದರು.
ಇದೇ ವೇಳೆ ಇನ್ನೂ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಎಸ್ಎಡಿ ಮತ್ತು ಎಎಪಿ ಒಂದು ಸದಸ್ಯರ ಮತ್ತು ಒಂದು ಕುಟುಂಬದ ಪಕ್ಷ. ಆದರೆ ಕಾಂಗ್ರೆಸ್ ಒಂದು ರಚನಾತ್ಮಕ ಪಕ್ಷವಾಗಿದ್ದು, ತತ್ವ ಸಿದ್ದಾಂತಗಳ ಮೇಲೆ ಕೆಲಸ ಮಾಡುತ್ತದೆ. ಅಭ್ಯರ್ಥಿಗಳ ಪಟ್ಟಿ ವಿಳಂಬವಾಗುವುದರಿಂದ ಚುನಾವಣೆ ಗೆಲುವಿನ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಮ್ಮದು ದೊಡ್ಡ ಪಕ್ಷ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ಪ್ರಕಟಿಸಲು ಕಾಲಾವಕಾಶ ಬೇಕು ಎಂದರು.
SCROLL FOR NEXT