ಪಾಕ್ ಆಕ್ರಮಿತ ಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಭಯೋತ್ಪಾದಕ ದಾಳಿಗೆ ಉತ್ತೇಜನ ನೀಡುತ್ತಿರುವ ಪಾಕಿಸ್ತಾನ ಉಗ್ರರಿಗೆ ಆರ್ಥಿಕ ಬೆಂಬಲ ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಪಾಕ್ ಸರ್ಕಾರ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಪಾಕಿಸ್ತಾನದ ನಾಯಕನೇ ಬಹಿರಂಗಪಡಿಸಿರುವುದು ಪಾಕಿಸ್ತಾನದ ಮುಖವಾಡ ಕಳಚಿ ಬಿದ್ದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿರುವ ಜಮ್ಮು-ಕಾಶ್ಮೀರ ಅಮನ್ ಫೋರಂನ ನಾಯಕ ಸರ್ದಾರ್ ರಯೀಸ್ ಇನ್ ಕ್ಲಾಬಿ ಪಾಕಿಸ್ತಾನ ಉಗ್ರರಿಗೆ ಆರ್ಥಿಕ ಬೆಂಬಲ ನೀಡುತ್ತಿದ್ದು, ಪ್ರತಿ ಉಗ್ರರಿಗೆ ಗಡಿ ನಿಯಂತ್ರಣ ರೇಖೆ ದಾಟಲು 1 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ರಯೀಸ್ ಇನ್ ಕ್ಲಾಬಿ ಹೇಳಿಕೆ ನೀಡಿದ್ದು ವಿಡಿಯೋ ಎಎನ್ಐ ಪ್ರಕಟಿಸಿದೆ.