ಜಯಲಲಿತಾ 
ದೇಶ

ದೇಶದ ಸರ್ವತೋಮುಖ ಬೆಳವಣಿಗೆ ಬಗ್ಗೆ ಜಯಲಲಿತಾಗಿತ್ತು ಅತೀವ ಕಾಳಜಿ

ತಮಿಳು ನಾಡಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಬಡಜನರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಅವರನ್ನು ಬಡತನದಿಂದ ಮೇಲೆತ್ತಲು ಹಲವು ಜನಪರ ...

ನವದೆಹಲಿ: ತಮಿಳು ನಾಡಿನ ಮುಖ್ಯಮಂತ್ರಿ ದಿವಂಗತ  ಜಯಲಲಿತಾ ಅವರು ಬಡಜನರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಅವರನ್ನು ಬಡತನದಿಂದ ಮೇಲೆತ್ತಲು ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ದೇಶದ ಎಲ್ಲಾ ಜನತೆ ಸಮಾನತೆಯಿಂದ ಬಾಳಬೇಕು ಎಂಬುದು ಅವರ ಧ್ಯೇಯೋದ್ದೇಶವಾಗಿತ್ತು ಎಂಬುದನ್ನು ಪ್ರಧಾನಿ ಕಾರ್ಯಾಲಯದಲ್ಲಿ ಸಿಕ್ಕಿರುವ ಕಟತವೊಂದು ಬಹಿರಂಗ ಪಡಿಸಿದೆ.

ಯಾವ ಯಾವ ವಲಯಗಳಲ್ಲಿ ಸುಧಾರಣೆಯಾಗಬೇಕು ಎಂಬ ಮಾಹಿತಿಗಳನ್ನೊಳಗೊಂಡ ಮೂರು ಪುಟಗಳ ಕಟತವನ್ನು ಫೆಬ್ರವರಿ 2016 ರಂದು ಅಮಿತಾಬ್ ಕಾಂತ್, ರತನ್ ಪಿ ವಾಟಾಳ್, ಅರ್ಧನಾ ಜೋಹ್ರಿ ಮತ್ತು ರಾಕೇಶ್ ಗಾರ್ಗ್ ಅವರನ್ನೊಳಗೊಂಡ ಸಮಿತಿ ಪ್ರಧಾನಿ ಕಚೇರಿಗೆ ಕಡತವನ್ನು ಸಲ್ಲಿಸಿದೆ.

ಸಮಾಜದ ಪ್ರತಿಯೊಬ್ಬರಿಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹೇಗೆ ತಲುಪುಬೇಕು, ಗ್ರಾಮಾಂತರ ಪ್ರದೇಶದಲ್ಲಿ ತೆರಿಗೆ ಸೇವೆ ಸೇರಿದಂತೆ ಇತರ ವಲಯಗಳಲ್ಲಿ ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ವಿವರವನ್ನು ಒಳಗೊಂಡಿದೆ.

ಸರ್ಕಾರದ ಪ್ರಮುಖ ಯೋಜನೆಗಳಾದ ಎಂಎನ್ಆರ್ ಇ ಜಿಎಸ್ ಯೋಜನೆಗಳು  ಪಾರದರ್ಶಕವಾಗಿ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಎಸ್ ಎಂ ಎಸ್ ಆಧಾರಿತ ಸೇವೆಗೆ ಚಾಲನೆ ಕೊಡಬೇಕು. ಪ್ರಧಾನಿ ಮಂತ್ರಿ ಮೋದಿ ಅವರ ಕನಸಾದ ನಗದು ರಹಿತ ವ್ಯವಹಾರವನ್ನು ಜಯಲಲಿತಾ ಈ ಮೊದಲೇ ಚಿಂತಿಸಿದ್ದರು ಎಂಬುದು ಅವರು ಬರೆದಿರುವ ಪತ್ರದಲ್ಲಿದೆ.

ವಿಮೆ ಮತ್ತು ಆರೋಗ್ಯ ವಲಯದಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಉದಾರೀಕರಣ, ಗ್ರಾಮೀಣ ಬ್ಯಾಂಕ್, ಮೊಬೈಲ್ ಟೆಕ್ನಾಲಜಿಗಳ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂಬುದು ಅವರ ಆಶಯವಾಗಿತ್ತು.

ಸುಂಕ ಮತ್ತು ತೆರಿಗೆ ಇಲಾಖೆಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸುಧಾರಣೆ ತರಲು ಜಯಲಲಿತಾ ಬಯಸಿದ್ದರು. ಎಂಜಿನಿಯರಿಂಗ್ ಮತ್ತು ನಿರ್ಮಾಣಗಳಲ್ಲಿ ಟಿಡಿಎಸ್ ಕಡಿಮೆ ಮಾಡಲು ಜಯ ನಿರ್ಧರಿಸಿದ್ದರು.

ಬಂಡವಾಳ ಹೂಡಲು ಪ್ರೋತ್ಸಾಹ ನೀಡಲು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳ ನಿರ್ಮಾಣ ಮಾಡುವುದರ ಮೂಲಕ ಬಡವರಿಗೆ ಹೆಚ್ಚಿನ ಆರೋಗ್ಯ ಸೇವೆಗಳನ್ನು ಒದಗಿಸುವುದು, ಆರೋಗ್ಯ ಸೇವೆಗಳಿಗೆ ಸೇವಾ ತೆರಿಗೆ, ಆಮದು ಸುಂಕಗಳ ಬಗ್ಗೆ ಗಮನ ಹರಿಸುವುದು ಪ್ರಮುಖ ಆದ್ಯತೆಯಾಗಿತ್ತು. ಹೀಗಾಗಿ ಜಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿತ್ತು.

ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.  ಜಾಗತಿಕ ಮಟ್ಟದಲ್ಲಿ ದೇಶದ ಬೆಳವಣಿಗಾಗಿ ವ್ಯಾಪಾರ ಮೇಳಗಳು, ಖರೀದಿದಾರ ಹಾಗೂ ಮಾರಾಟಗಾರರ ಭೇಟಿ ಸೇರಿದಂತೆ ಸಮಾವೇಶ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುವಂತೆ ಜಯಲಲಿತಾ ತಿಳಿಸಿದ್ದಾರೆ.

ಈ ಎಲ್ಲಾ ಪ್ರಮುಖ ಅಂಶಗಳು ದೇಶದ ಅಭಿವೃದ್ಧಿಗೆ ಜಯಲಲಿತಾ ಅವರು ಹೊಂದಿದ್ದ ದೂರ ದೃಷ್ಟಿ ಹಾಗೂ ಬಡವರ ಪರ ಕಾಳಜಿಯನ್ನು ತಿಳಿಸುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT