ದೇಶ

ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ಕ್ರಮವನ್ನು ಸ್ವಾಗತಿಸಿದ ಪತ್ನಿ ಜಶೋದಾಬೆನ್

Vishwanath S
ಕೋಟಾ: 500-1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಪತ್ನಿ ಜಶೋದಾಬೆನ್ ಸ್ವಾಗತಿಸಿದ್ದಾರೆ. 
ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ತಡೆಯಬಹುದಾಗಿದೆ. ದೇಶದ ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಜಶೋದಾಬೆನ್ ಅವರು ಹೇಳಿದ್ದಾರೆ. 
ರಾಜಸ್ಥಾನದ ಕೋಟದಲ್ಲಿ ನಡೆದ ಸಮಾರಂಭವೊಂದರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಶೋದಾಬೆನ್ ರನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯನ್ನು ಕುರಿತು ಕೇಳಿದಾಗ ಜಶೋದಾಬೆನ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. 
SCROLL FOR NEXT