ದೇಶ

ಜಪ್ತಿ ಮಾಡಿರುವ 100 ಕೋಟಿ ರು. ಮೌಲ್ಯದ ಹೊಸ ನೋಟುಗಳ ಚಲಾವಣೆಗೆ ಜಾರಿ ನಿರ್ದೇಶನಾಲಯ ಸೂಚನೆ

Shilpa D

ನವದೆಹಲಿ:  ನೋಟು ನಿಷೇಧದ ನಂತರ ವಶಪಡಿಸಿಕೊಂಡಿರುವ ಸುಮಾರು 100 ಕೋಟಿ ರು ಮೌಲ್ಯದ ಹೊಸ ನೋಟುಗಳನ್ನು ಚಲಾವಣಗೆ ಬಿಡಬೇಕೆಂದು ಜಾರಿ ನಿರ್ದೇಶನಾಲಯ ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರಿಗೆ ಸೂಚಿಸಿದೆ.

ಜಪ್ತಿ ಮಾಡಿರುವ ಹಣ ಹಾಗೂ ಇತರೆ ವಸ್ತುಗಳನ್ನು ಸ್ಟ್ರಾಂಗ್ ರೂಮ್ ನಲ್ಲಿಡಲಾಗಿದ್ದು, 2ಸಾವಿರ ಹಾಗೂ 500 ರು ಹೊಸ ನೋಟುಗಳನ್ನು ಬ್ಯಾಂಕ್ ಅಕೌಂಟ್ ಗೆ ನೀಡಿ ಜನ ಸಾಮಾನ್ಯರಿಗೆ ಎದುರಾಗುವ ಸಮಸ್ಯೆಯನ್ನು ತಪ್ಪಿಸಬೇಕು ಎಂದು ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಸಿಂಗ್  ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ವಿವಿಧ ನಗರಗಳಲ್ಲಿ ಎಜೆನ್ಸಿಗಳೇ ಬ್ಯಾಂಕ್ ಖಾತೆ ತೆರೆದು ವಶ ಪಡಿಸಿಕೊಂಡಿರುವ ಹಣವನ್ನು ಖಾತೆಗೆ ಡೆಪಾಸಿಟ್ ಮಾಡುವಂತೆ ಇಡಿ ಸೂಚಿಸಿದೆ.

ಈ ಮೊದಲು ಕೇಸು ತೀರ್ಮಾನವಾಗುವವರೆಗೂ ವಶ ಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆ ತನ್ನ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿ ಇಟ್ಟಿರುತ್ತಿತ್ತು, ಆದರೆ  ಈಗ ಜಪ್ತಿ ಮಾಡಿರುವ ಹೊಸ ನೋಟುಗಳನ್ನು ಬ್ಯಾಂಕ್ ಗಳಿಗೆ ಡೆಪಾಸಿಟ್ ಮಾಡುವಂತೆ ಜಾರಿ ನಿರ್ದೇಶಾನಲಯ ಇಲಾಖೆ ಐಟಿ ಅಧಿಕಾರಿಗಳಿಗೆ ಸೂಚಿಸಿದೆ.

ನೋಟು ನಿಷೇದದ ನಂತರ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ ಇಲಾಖೆಗಳಲ್ಲಿ ಸುಮಾರು 60 ಕೋಟಿಗೂ ಅಧಿಕ ಹೊಸ ನೋಟುಗಳನ್ನು ವಶ ಪಡಿಸಿಕೊಂಡಿದ್ದವು.

ಸೋಮವಾರ ಕೂಡ ಜಾರಿ ನಿರ್ದೇಶನಾಲಯ ಪಂಜಾಬ್ ನ ಶೈಕ್ಷಣಿಗ ಸಂಸ್ಥೆಯೊಂದರಲ್ಲಿ 47 ಲಕ್ಷ ರು. ಹೊಸ 2ಸಾವಿರ ರು ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದೆ.

SCROLL FOR NEXT