ದೇಶ

ಮಮತಾ ಬ್ಯಾನರ್ಜಿ ಭ್ರಷ್ಟರ ಪರ ವಕೀಲೆಯಾಗಿದ್ದಾರೆ: ಬಿಜೆಪಿ

Manjula VN

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಜನರ ಪರ ವಕೀಲೆಯಾಗಿಬಿಟ್ಟಿದ್ದಾರೆಂದು ಬಿಜೆಪಿ ಬುಧವಾರ ಟೀಕೆ ಮಾಡಿದೆ.

ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿಯವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಶ್ರೀಕಾಂತ್ ಶರ್ಮಾ ಅವರು, ಮಮತಾ ಬ್ಯಾನರ್ಜಿಯವರು ಕಪ್ಪುಹಣ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಜನರ ಪರ ವಕೀಲೆಯಾಗಿದ್ದಾರೆಂದು ಹೇಳಿದ್ದಾರೆ.

ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವಾಗಿ ಪರಿವರ್ತಿಸುವಂತೆ ಜನರು ಮಮತಾ ಅವರಿಗೆ ಮತ ಹಾಕಿದ್ದಾರೆ. ಆದರೆ, ಮಮತಾ ಅವರು ಭ್ರಷ್ಟರ ಪರ ವಕೀಲೆಯಾಗಿ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನರು ಶೀಘ್ರದಲ್ಲಿಯೇ ಸರಿಯಾದ ಉತ್ತರವನ್ನು ನೀಡುತ್ತಾರೆಂದು ತಿಳಿಸಿದ್ದಾರೆ.

SCROLL FOR NEXT