ಸಂಗ್ರಹ ಚಿತ್ರ 
ದೇಶ

200 ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರದ ಮೇಲೆ ನಿಗಾವಹಿಸಿ: ಐಟಿ ಇಲಾಖೆಗೆ ಚುನಾವಣಾ ಆಯೋಗ ಮನವಿ

ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ 200 ರಾಜಕೀಯ ಪಕ್ಷಗಳ ಹಣಕಾಸಿನ ವ್ಯವಹಾರದ ಮೇಲೆ ನಿಗಾವಹಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಲು ಮುಂದಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ 200 ರಾಜಕೀಯ ಪಕ್ಷಗಳ ಹಣಕಾಸಿನ ವ್ಯವಹಾರದ ಮೇಲೆ ನಿಗಾವಹಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಲು ಮುಂದಾಗಿದೆ.

ಮೂಲಗಳ ಪ್ರಕಾರ 2005ರಿಂದಲೂ ಹಲವು ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗ ಗುರುತಿಸಿದ್ದು, ಈ ಪೈಕಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ 200 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದೀಗ ಈ 200  ರಾಜಕೀಯ ಪಕ್ಷಗಳ ಹಣಕಾಸಿನ ವ್ಯವಹಾರದ ಮೇಲೆ ನಿಗಾ ವಹಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದೆ.

ನೋಟು ನಿಷೇಧದ ಬಳಿಕ ಕಪ್ಪುಹಣವನ್ನು ಬಿಳಿಯಾಗಿಸುವ ಪ್ರಕ್ರಿಯೆ ಎಲ್ಲಡೆ ವ್ಯಾಪಕವಾಗಿದ್ದು, ಇದೇ ಸಂದರ್ಭದಲ್ಲಿ ಈ ಪಟ್ಟಿಯಿಂದ ಹೊರ ತೆಗೆದ ರಾಜಕೀಯ ಪಕ್ಷಗಳ ಮೂಲಕ ಕಾಳಧನಿಕರು ತಮ್ಮಲ್ಲಿನ ಕಪ್ಪುಹಣವನ್ನು  ಬಿಳಿಯಾಗಿಸಿ ಕೊಳ್ಳುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳ ಚಂದಾ ಪುಸ್ತಕವನ್ನು ದುರುಪಯೊಗ ಪಡಿಸಿಕೊಂಡು ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ. ಅಂತೆಯೇ ಇನ್ನು  ಕೆಲವೇ ದಿನಗಳಲ್ಲಿ ಆಯೋಗ ತಾನು ಪಟ್ಟಿಯಿಂದ ಹೊರ ತೆಗೆದಿರುವ 200 ರಾಜಕೀಯ ಪಕ್ಷಗಳ ಹೆಸರುಗಳ ಪಟ್ಟಿಯನ್ನು ನೀಡುವುದಾಗಿಯೂ ತಿಳಿಸಿದೆ.

ಅಂತೆಯೇ ರಾಜಕೀಯ ಪಕ್ಷಗಳ ನೋಂದಣಿಯನ್ನು ಅಸಿಂಧುಗೊಳಿಸುವ ಹಕ್ಕಿಗಾಗಿಯೂ ಕೇಂದ್ರ ಚುನಾವಣಾ ಆಯೋಗ ಹೋರಾಡುತ್ತಿದ್ದು, ಪಟ್ಟಿಯಿಂದ ಹೊರತೆಗೆದ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರ  ನೀಡಬೇಕು ಎಂದು ಹಲವು ವರ್ಷಗಳಿಂದ ಚುನಾವಣಾ ಆಯೋಗ ಕೇಳಿತ್ತು. ಆದರೆ ಈ ವರೆಗೂ ಅದು ಸಕಾರವಾಗಿಲ್ಲ. ಹೀಗಾಗಿ ಸಂವಿಧಾನದ ಕಲಂ 324ರ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಬಳಸಿಕೊಂಡು ಚುನಾವಣೆಯಲ್ಲಿ  ಸ್ಪರ್ಧಿಸದ ಪಕ್ಷಗಳನ್ನು ಪಟ್ಟಿಯಿಂದ ಹೊರತೆಗೆದಿದೆ.

ಈಗಲೂ ದೇಶಾದ್ಯಂತ ಸುಮಾರು 1780 ಪಕ್ಷಗಳು ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ ಬಹುತೇಕ ಪಕ್ಷಗಳು ಗುರುತಿಸಲಾಗದ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿವೆ. ಇದರ ಹೊರತಾಗಿಯೂ ದೇಶದಲ್ಲಿ  ಬಿಜೆಪಿ, ಕಾಂಗ್ರೆಸ್,  ಬಿಎಸ್ ಪಿ, ಟಿಎಂಸಿ, ಸಿಪಿಐ, ಸಿಪಿಐಎಂ ಮತ್ತು ಎನ್ ಸಿಪಿ ಪಕ್ಷಗಳಂತಹ 7 ರಾಷ್ಟ್ರೀಯ ಪಕ್ಷಗಳಿದ್ದು, 58 ಪ್ರಾದೇಶಿಕ ಪಕ್ಷಗಳಿವೆ. ಚುನಾವಣಾ ಸಂದರ್ಭದಲ್ಲಿ ಕಪ್ಪುಹಣ ಚಲಾವಣೆ ತಡೆಯಲು ಚುನಾವಣಾ ಆಯೋಗ ಸಾಕಷ್ಟು  ಕ್ರಮಗಳನ್ನು ಕೈಗೊಂಡಿದೆಯಾದರೂ, ಈ ಪೈಕಿ ಬಹುತೇಕ ನಿರ್ಧಾರಗಳು ಇನ್ನೂ ಪರಿಪೂರ್ಣವಾಗಿ ಜಾರಿಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ; ಚಾರಿತ್ರ್ಯಹನನದ ಪ್ರಯತ್ನ- ಸಿದ್ದರಾಮಯ್ಯ