ವಿಜಯವಾಡ: ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಜನಸೇನಾ ಮುಖ್ಯಸ್ಥ ಮತ್ತು ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ನೋಟುಗಳ ನಿಷೇಧದ ಬಗ್ಗೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ವಿರುದ್ಧ ನಿನ್ನೆ ಸರಣಿ ಟ್ವೀಟ್ ಗಳ ಮೂಲಕ ಟೀಕೆಯ ಸುರಿಮಳೆಗೈದಿದ್ದಾರೆ. ಆದರೆ ಈ ಬಾರಿ ಬಿಜೆಪಿ ನಾಯಕರು ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದು ಪವನ್ ಕಲ್ಯಾಣ್ ಅವರು ಮೊದಲು ತನ್ನ ಮೂಲಭೂತ ಹಕ್ಕನ್ನು ಪಡೆಯಲು ಪ್ರಯತ್ನಿಸಲಿ ಎಂದು ಸಲಹೆ ನೀಡಿದ್ದಾರೆ.
ಊರ್ಜಿತ್ ಪಟೇಲ್ ಅವರು ನೋಟುಗಳ ಅಮಾನ್ಯತೆ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ. ಅಧಿಕ ಮೌಲ್ಯದ ನೋಟುಗಳ ನಿಷೇಧದಿಂದಾಗಿ ಎಷ್ಟು ತೊಂದರೆಯಾಗುತ್ತಿದೆಯೆಂದರೆ ಕರ್ನೂಲ್ ಜಿಲ್ಲೆಯಲ್ಲಿ ಬಾಲರಾಜು ಎಂಬುವವರೊಬ್ಬರು ಬ್ಯಾಂಕು ಮುಂದೆ ಹಣಕ್ಕಾಗಿ ಸಾಲಿನಲ್ಲಿ ನಿಂತಿದ್ದಾಗ ಮೃತಪಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಸ್ವಾತಂತ್ರ ಸಿಕ್ಕಿ 70 ವರ್ಷವಾದರೂ ಮಲ ಹೊರುವಂತಹ ಅನಿಷ್ಟ ಪದ್ಧತಿಯಿರುವ ಭಾರತದಂತಹ ದೇಶದಲ್ಲಿ ನಗದುರಹಿತ ವಹಿವಾಟುಗಳನ್ನು ಯೋಚಿಸಲು ಸಾಧ್ಯವೇ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ.