ದೇಶ

ಮಧ್ಯಪ್ರದೇಶದಲ್ಲಿ 2000 ರು.ನಕಲಿ ನೋಟ್ ಮುದ್ರಿಸುತ್ತಿದ್ದ ಇಬ್ಬರ ಬಂಧನ

Lingaraj Badiger
ಚಿತ್ತರಪುರ್: ಮಧ್ಯಪ್ರದೇಶ ಪೊಲೀಸರು ಗುರುವಾರ ಚಿತ್ತರಪುರದ ಲವಕುಶನಗರದಲ್ಲಿ ಹೊಸ 2000 ರುಪಾಯಿ ಮುಖಬೆಲೆಯ ನಕಲಿ ನೋಟ್ ಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳು ಕಲರ್ ಪ್ರಿಂಟರ್ ಸಹಾಯದೊಂದಿಗೆ ಹೊಸ 2000 ರುಪಾಯಿ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ 2000 ರುಪಾಯಿ ಮುಖಬೆಲೆಯ ಎರಡು ಲಕ್ಷ ರುಪಾಯಿ ಮೌಲ್ಯದ ನಕಲಿ ನೋಟ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ನವೆಂಬರ್ 8ರಂದು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ, ಹೊಸ ಎರಡು ಸಾವಿರ ರುಪಾಯಿ ಬಿಡುಗಡೆ ಮಾಡಿತ್ತು. ನೋಟ್ ನಿಷೇಧದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶಾದ್ಯಂತ ಹಲವು ಕಡೆ ದಾಳಿ ನಡೆಸಿ, ಸಾವಿರಾರು ಕೋಟಿ ರುಪಾಯಿ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
SCROLL FOR NEXT