ಸಂಗ್ರಹ ಚಿತ್ರ 
ದೇಶ

ನೋಟು ನಿಷೇಧ: ಮತ್ತೆ ಯೂಟರ್ನ್ ಹೊಡೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!

ನೋಟು ನಿಷೇಧದ ಕುರಿತಂತೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆಂಧ್ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮತ್ತೆ ಯೂಟರ್ನ್ ಹೊಡೆದಿದ್ದು, ತಾವೇನೂ ನೋಟು ನಿಷೇಧದ ವಿರುದ್ಧವಾಗಿಲ್ಲ. ಆದರೆ ಜನರ ಪರದಾಟದ ಕುರಿತಂತೆ ಕಳವಳಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಹೈದರಾಬಾದ್: ನೋಟು ನಿಷೇಧದ ಕುರಿತಂತೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆಂಧ್ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮತ್ತೆ ಯೂಟರ್ನ್ ಹೊಡೆದಿದ್ದು, ತಾವೇನೂ ನೋಟು ನಿಷೇಧದ  ವಿರುದ್ಧವಾಗಿಲ್ಲ. ಆದರೆ ಜನರ ಪರದಾಟದ ಕುರಿತಂತೆ ಕಳವಳಗೊಂಡಿದ್ದೇನೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಗರಿಷ್ಠ ಮೌಲ್ಯದ ನೋಟುಗಳ ನಿಷೇಧ ನಮ್ಮ ಆಶಯ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ನಾಯ್ಡು, ಇದೀಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ. ನಿನ್ನೆ ತಾವು ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ  ಅರ್ಥೈಸಿಕೊಂಡಿದ್ದು, ತಾವು ನೋಟು ನಿಷೇಧವನ್ನು ವಿರೋಧಿಸಿರಲಿಲ್ಲ. ಆದರೆ ನೋಟು ನಿಷೇಧ ಜಾರಿಯಲ್ಲಾದ ಲೋಪದೋಷಗಳ ಕುರಿತು ಮಾತನಾಡಿದ್ದೇ ಅಷ್ಟೇ. ನೋಟು ನಿಷೇಧವಾಗಿ ಒಂದು ತಿಂಗಳಾದರೂ ಜನರ ಭವಣೆ  ಮಾತ್ರ ನೀಗಿಲ್ಲ. ನಗದು ಕೊರತೆಯಿಂದಾಗಿ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಗಳ ಮುಂದೆ ನಿಂತ ಹಿರಿಯ ನಾಗರೀಕರು ಕುಸಿಯುತ್ತಿರುವ ಸುದ್ದಿಗಳನ್ನು ನೋಡಿದರೆ ತುಂಬಾ ದುಃಖವಾಗುತ್ತದೆ ಎಂದು  ಹೇಳಿದ್ದಾರೆ.

ಹುಡ್ ಹುಡ್ ಚಂಡಮಾರುತದಂತಹ ವಿಷಮಕಾರಿ ಪರಿಸ್ಥಿತಿಯನ್ನೇ ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಆದರೆ ನೋಟು ನಿಷೇಧದ ಬಳಿಕ ಉಂಟಾದ ಬಿಕ್ಕಟ್ಟನ್ನು ಶಮನಗೊಳಿಸಲು ಆಗುತ್ತಿಲ್ಲ. ಕಾರಣ ಹೊಸ ನೋಟುಗಳ  ಅಭಾವ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಇದೇ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಚಂದ್ರಬಾಬು ನಾಯ್ಡು ನೋಟಿನ ಬಿಕ್ಕಟ್ಟನ್ನು ಶಮನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!