ದೇಶ

ವಿಪಕ್ಷಗಳ ವಿರುದ್ಧ ಆರೋಪಕ್ಕೂ ಮುನ್ನ ಮೋದಿ ಮೊದಲು ತಮ್ಮ ಪ್ರತಿಬಿಂಬ ನೋಡಿಕೊಳ್ಳಬೇಕು: ಸಿಪಿಐ (ಎಂ)

Manjula VN

ನವದೆಹಲಿ: ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡುವುದಕ್ಕೂ ಮುನ್ನ ಪ್ರಧಾನಿ ಮೋದಿಯವರು ಮೊದಲು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬೇಕಿದೆ ಎಂದು ಎಂದು ಸಿಪಿಐ(ಎಂ) ಪಕ್ಷದ ನಾಯಕಿ ಬೃಂದಾ ಕಾರತ್ ಅವರು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಮೋದಿಯವರು ತಮ್ಮ ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡುವುದಕ್ಕೂ ಪ್ರಧಾನಿ ಮೋದಿಯವರು ಕನ್ನಡಿಯ ಮುಂದೆ ನಿಂತು ಮೊದಲು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ದೊಡ್ಡ ದೊಡ್ಡ ಉದ್ಯಮಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದು, ಅಂತಹ ಉದ್ಯಮಗಿಳಿಗೆ ಮೋದಿಯವರು ಪ್ರೋತ್ಸಾಹ ನೀಡುತ್ತಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಹಣವನ್ನು ಹೂಡಲಾಗುತ್ತಿದೆ. ರು.11 ಲಕ್ಷ ಕೋಟಿ ಹಣವನ್ನು ಹೂಡುತ್ತಿದ್ದಾರೆ. ಇಂತಹ ಹಣ ಬೇನಾಮಿ ಆಸ್ತಿಯಲ್ಲದೇ ಇದ್ದರೆ, ಬೇನಾಮಿ ಆಸ್ತಿ ಎನ್ನುವುದಾದರೂ ಯಾವುದಕ್ಕೆ?...ಯಾವುದು ಅಪ್ರಮಾಣಿಕತೆ...? ಇಂತಹ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ ಮೋದಿಯವರು ವಿದೇಶಗಳಿಗೆ ಹೋಗುತ್ತಿರುತ್ತಾರೆ. ಅವರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಆರೋಪ ಮಾಡುವುದಕ್ಕೂ ಮುನ್ನ ಮೋದಿಯವರು ಮೊದಲು ತಮ್ಮ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕಾಂಗ್ರೆಸ್ ನ ಯುವ ನಾಯಕ ಈಗ ಮಾತನಾಡಲು ಕಲಿಯುತ್ತಿದ್ದಾರೆ. ಹೇಗೆ ಮಾತನಾಡಬೇಕು ಎಂದು ಅವರು ಕಲಿಯಲು ಆರಂಭಿಸಿದ್ದಕ್ಕೆ ನನಗೆ ಸಂತೋಷವಿದೆ. 2009ರಲ್ಲಿ ಈ ಪೊಟ್ಟಣದೊಳಗೆ ಏನಿದೆ ಎಂದು ಹೇಳಲು ಕೂಡ ನಿಮಗೆ ಸಾಧ್ಯವಾಗುತ್ತಿರಲಿಲ್ಲ, ಈಗ ನಮಗೆ ಅದರೊಳಗೆ ಏನಿದೆ ಅಂತ ಗೊತ್ತಾಗಿದೆ ಎಂದು ಹೇಳಿದ್ದರು. ಈ ಮೂಲಕ ಲಂಚ ಆರೋಪ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ್ದರು.

SCROLL FOR NEXT