ದೇಶ

2017ರಲ್ಲಿ ಮತ್ತೆ 200 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ: ಸುರೇಶ್ ಪ್ರಭು

Lingaraj Badiger
ತಿರುವನಂತಪುರಂ: 2017ರಲ್ಲಿ ಮತ್ತೆ 200 ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಕೆಲವು ಹೆಚ್ಚುವರಿ ರೈಲುಗಳಲ್ಲಿ ವೈ-ಫೈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸೋಮವಾರ ಹೇಳಿದ್ದಾರೆ.
ಕಣ್ಣೂರು, ಎರ್ನಾಕೂಲಂ ಮತ್ತು ಕೊಲ್ಲಂನ ರೈಲ್ವೆ ಗ್ರಾಹಕರಿಗೆ ಆರು ವೈ-ಫೈ ಸೌಲಭ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಸುರೇಶ್ ಪ್ರಭು, ಈ ವರ್ಷ ಒಟ್ಟು 100 ರೈಲ್ವೆ ನಿಲ್ದಾಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದಿನ ವರ್ಷ 200 ರೈಲ್ವೆ ನಿಲ್ದಾಣಗಳಲ್ಲಿ ಈ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಸಣ್ಣ ನಗರ ಮತ್ತು ಪಟ್ಣದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈಫೈ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕೇಲೇಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
SCROLL FOR NEXT