ವಾಸುದೇವಾನಂದ ಸರಸ್ವತಿ 
ದೇಶ

ಪ್ರತಿಯೊಬ್ಬ ಹಿಂದು 10 ಮಕ್ಕಳನ್ನು ಹೆರಬೇಕು, ದೇವರು ಕಾಪಾಡುತ್ತಾನೆ: ವಾಸುದೇವಾನಂದ ಸರಸ್ವತಿ

ದೇಶದಲ್ಲಿರುವ ಪ್ರತಿಯೊಬ್ಬ ಹಿಂದು 10 ಮಕ್ಕಳಿಗೆ ಜನ್ಮ ನೀಡಬೇಕು, ದೇವರು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ ಎಂದು ಜ್ಯೋತಿರ್ ಮಠದ ...

ನಾಗ್ ಪುರ: ದೇಶದಲ್ಲಿರುವ ಪ್ರತಿಯೊಬ್ಬ ಹಿಂದು 10 ಮಕ್ಕಳಿಗೆ ಜನ್ಮ ನೀಡಬೇಕು, ದೇವರು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ ಎಂದು ಜ್ಯೋತಿರ್ ಮಠದ ವಾಸುದೇವಾನಂದ ಸರಸ್ವತಿ ಕರೆ ನೀಡಿದ್ದಾರೆ.

ನಾಗ್ಪುರದಲ್ಲಿ ನಡೆದ ಧರ್ಮ ಸಂಸ್ಕೃತಿ ಮಹಾಕುಂಭ ಕಾರ್ಯಕ್ರಮದಲ್ಲಿ  ಮಾತನಾಡಿದ ಶ್ರೀಗಳು ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು. 'ಇಬ್ಬರು ಮಕ್ಕಳನ್ನೇ ಹೆರಬೇಕೆಂಬ ಕಾನೂನನ್ನು ಬದಿಗೆ ಸರಿಸಬೇಕು. ಹಿಂದುಗಳು 10 ಮಕ್ಕಳನ್ನು ಹೆರಬೇಕು. ಯಾರಿಗೂ ಹೆದರಬಾರದದು. ಮಕ್ಕಳ ಯೋಗ ಕ್ಷೇಮ ಪೋಷಣೆಯನ್ನು ದೇವರೇ ನೋಡಿಕೊಳ್ತಾನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗೋಹತ್ಯೆ ನಿಷೇಧ ಕುರಿತು ತಕ್ಷಣ ನಿರ್ಣಯ ಕೈಗೊಳ್ಳಬೇಕೆಂದು ಕೂಡಾ ವಾಸುದೇವಾನಂದ ಸರಸ್ವತಿ ಒತ್ತಾಯಿಸಿದ ಅವರು ದೇಶದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌, ಅಸ್ಸೋಂ ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಪಾಲ್ಗೊಂಡಿದ್ದರು.
 
ವಾಸುದೇವಾನಂದ ಶ್ರೀಗಳ ಕರೆಗೆ ತೊಗಾಡಿಯಾ, ಮೋಹನ್ ಭಾಗವತ್‌ ಸಮರ್ಥಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಧು ಸಂತರರೆಲ್ಲ ದೇಶಕ್ಕೆ ಹೆಚ್ಚೆಚ್ಚು ಹಿಂದುಗಳು ಬೇಕು. ಇದಕ್ಕಾಗಿ ಹಿಂದುಗಳು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ