ದೇಶ

ಶಬರಿಮಲೆಯಲ್ಲಿ ಜನದಟ್ಟಣೆ ನಿಯಂತ್ರಿಸಲು ವೈಜ್ಞಾನಿಕ ಕ್ರಮ ಅಳವಡಿಕೆಗೆ ಕೇರಳ ಸರ್ಕಾರ ಚಿಂತನೆ

Sumana Upadhyaya
ಶಬರಿಮಲ: ಖ್ಯಾತ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ, ಸಂಕ್ರಾಂತಿ ಸಮಯದಲ್ಲಿ ಯಾತ್ರಿಕರ ನೂಕುನುಗ್ಗಲನ್ನು ನಿಯಂತ್ರಿಸಲು ವೈಜ್ಞಾನಿಕ ಕ್ರಮವನ್ನು ಜಾರಿಗೆ ತರಲಾಗುವುದು ಎಂದು ಕೇರಳದ ದೇವಸ್ವಮ್ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ಜನರ ನೂಕುನುಗ್ಗಲು ಜಾಸ್ತಿಯಾಗುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ, ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗುವುದು ಎಂದರು.
ನಿನ್ನೆ ಭಾನುವಾರ ಮಾಳಿಕಾಪ್ಪುರಂ ಎಂಬಲ್ಲಿ ಉಂಟಾದ ಕಾಲ್ತುಳಿತಕ್ಕೆ 31 ಜನರು ಗಾಯಗೊಂಡಿದ್ದಾರೆ. ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಚಿಕಿತ್ಸೆಯ ನೆರವಿಗೆ ರಾಜ್ಯ ಸರ್ಕಾರ ಸಹಾಯದ ನೆರವು ಚಾಚಿದೆ.
ಸಾಕಷ್ಟು ಪೊಲೀಸ್ ಸಿಬ್ಬಂದಿಯ ಕೊರತೆ ಮತ್ತು ಬ್ಯಾರಿಕೇಡ್ ಗಳು ಇಲ್ಲದಿರುವುದು ಕಾಲ್ತುಳಿತದಂತಹ ಘಟನೆಗಳಿಗೆ ಕಾರಣ ಎನ್ನಲಾಗುತ್ತಿದೆ. ನಿನ್ನೆಯ ಘಟನೆ ನಡೆದ ಸಮಯದಲ್ಲಿ ಸಾಕಷ್ಟು ಪೊಲೀಸ್ ಅಧಿಕಾರಿಗಳು, ಕೇಂದ್ರ ಅರೆಸೇನಾ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿ ಇರಲಿಲ್ಲ ಎಂದು ಭಕ್ತರು ಹೇಳುತ್ತಾರೆ.
SCROLL FOR NEXT