ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಪರಸ್ಪರ ಮುಖಾಮುಖಿಯಾಗಿರುವುದು 
ದೇಶ

ದೆಹಲಿ: ಒಂದೇ ರನ್ ವೇ ನಲ್ಲಿ ಎರಡು ವಿಮಾನಗಳ ಮುಖಾಮುಖಿ; ತಪ್ಪಿದ ದುರಂತ!

ಗೋವಾ ರನ್ ವೇನಲ್ಲಿ ಜೆಟ್ ಏರ್ ವೇಸ್ ವಿಮಾನ ಜಾರಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಪ್ರಕರಣ ನಡೆದ ಬೆನ್ನಲ್ಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅಂತಹುದೇ ಘಟನೆ ನಡೆದಿದೆ.

ನವದೆಹಲಿ: ಗೋವಾ ರನ್ ವೇನಲ್ಲಿ ಜೆಟ್ ಏರ್ ವೇಸ್ ವಿಮಾನ ಜಾರಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಪ್ರಕರಣ ನಡೆದ ಬೆನ್ನಲ್ಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅಂತಹುದೇ  ಘಟನೆ ನಡೆದಿದೆ.

ದೆಹಲಿ ವಿಮಾನ ನಿಲ್ದಾಣದ ರನ್ ವೇನಲ್ಲಿ ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಪರಸ್ಪರ ಮುಖಾಮುಖಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ. ಲಖನೌ ನಿಂದ ದೆಹಲಿಗೆ  ಆಗಮಿಸಿದ್ದ ವಿಮಾನ ಸಂಖ್ಯೆ 6ಇ769 (ಪಿಎಎಕ್ಸ್-176) ಇಂಡಿಗೋ ವಿಮಾನ ರನ್ ವೇ ನಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲೇ ಹೈದರಾಬಾದ್ ಗೆ ತೆರಳುತ್ತಿದ್ದ ಎಸ್ ಜಿ-123 ಸ್ಪೈಸ್ ಜೆಟ್ ವಿಮಾನ ಅದೇ ಸಂದರ್ಭದಲ್ಲಿ ಟೇಕ್ ಆಫ್  ಆಗಲು ಮುಂದಾಗಿತ್ತು. ಆ ಮೂಲಕ ಎರಡೂ ವಿಮಾನಗಳು ರನ್ ವೇನಲ್ಲಿ ಪರಸ್ಪರ ಮುಖಾಮಿಖಿಯಾಗಿದ್ದವು.

ಇನ್ನೇನು ವಿಮಾನಗಳ ಪರಸ್ಪರ ಢಿಕ್ಕಿಯಾಗುತ್ತಿವೆ ಎದು ತಿಳಿದ ಸ್ಪೈಸ್ ಜೆಟ್ ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಗಳು ಸಮಯ ಪ್ರಜ್ಞೆ ಮೆರೆದು ಕೂಡಲೇ ತಮ್ಮ ವಿಮಾನವನ್ನು ನಿಲ್ಲಿಸಿದ್ದಾರೆ. ಆ ಮೂಲಕ ಆಗಬಹುದಾಗಿದ್ದ  ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಐಟಿಸಿ ಟವರ್ ಗೆ ಸಂದೇಶ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಡಿಜಿಸಿಎ ವರದಿ ಕೇಳಿದ್ದು, ಪ್ರಕರಣದ ತನಿಖೆ ನಡೆಸುವಂತೆ  ಸೂಚಿಸಿದೆ.

ಬೆಳಗ್ಗೆಯಷ್ಟೇ ಗೋವಾ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ್ದ ವಿಮಾನವೊಂದು ರನ್ ವೇ ನಲ್ಲಿ ಜಾರಿತ್ತು. ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿಮಾನಕ್ಕೆ ಹಾನಿಯಾಗಿತ್ತು. ಈ ಪ್ರಕರಣದ ಬೆನ್ನಲ್ಲೇ  ದೆಹಲಿಯಲ್ಲಿ ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಪರಸ್ಪರ ಮುಖಾಮುಖಿಯಾಗಿರುವುದು ವಿಮಾನಯಾನದ ಸುರಕ್ಷತೆ ಕುರಿತಂತೆ ಶಂಕೆ ಮೂಡುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ