ದೇಶ

ಬಿ.ಕೆ. ಬನ್ಸಾಲ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಎತ್ತಂಗಡಿ

Manjula VN

ನವದೆಹಲಿ: ಮಾಜಿ ಉನ್ನತ ಸರ್ಕಾರಿ ಅಧಿಕಾರಿ ಬಿ.ಕೆ. ಬನ್ಸಾಲ್ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಸಿಬಿಐ ಡಿಐಜಿ ಸಂಜೀವ್ ಗೌತಮ್ ಅವರನ್ನು ಕೇಂದ್ರ ಸರ್ಕಾರ ಬುಧವಾರ ಹುದ್ದೆಯಿಂದ ಎತ್ತಂಗಡಿ ಮಾಡಿದೆ ಎಂದು ತಿಳಿದುಬಂದಿದೆ.

ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶ ಬಿ.ಕೆ ಬನ್ಸಾಲ್ ಅವರ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸುತುತ್ತಿದ್ದ ಸಿಬಿಐನ ಡಿಐಜಿ ಸಂಜೀವ್ ಗೌತಮ್ ಅವರನ್ನು ಹುದ್ದೆಯಿಂದ ತೆಗೆದು ಹಾಕಾಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ಸಾಲ್ ಅವರು ಜುಲೈ. 17 ರಂದು ಮುಂಬೈನ ಫಾರ್ಮಾಸುಟಿಕಲ್ ಕಂಪನಿಯೊಂದರಲ್ಲಿ ರು.9 ಲಕ್ಷ ಲಂಚ ಸ್ವೀಕರಿಸಿದರೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಬನ್ಸಾಲ್ ನಿವಾಸದಲ್ಲಿನ ಕಾರ್ಯಾಲಯದ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳಉ. ರು.60 ಲಕ್ಷ ಹಣ ಹಾಗೂ 20 ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು, ಬ್ಯಾಂಕ್ ಖಾತೆಗಳನ್ನು ವಶಕ್ಕೆಪ ಪಡೆದುಕೊಂಡಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 27ರಂದು ಬಿ.ಕೆ.ಬನ್ಸಾಲ್ ಹಾಗೂ ಅವರ ಪುತ್ರ ಯೋಗೇಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರು. ಆತ್ಮಹತ್ಯೆಗೆ ಶರಣಾದ ಮನೆಯಲ್ಲಿ ಡೆತ್ ನೋಟ್ ವೊಂದು ಪತ್ತೆಯಾಗಿತ್ತು. ಸಿಬಿಐ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳವೇ ಕುಟುಂಬದೊಂದಿಗೆ ಆತ್ಮಹತ್ಯೆಗೆ ಶರಣಾಗಲು ಕಾರಣ ಎಂದು ಬನ್ಸಾಲ್ ಅವರು ಹೇಳಿಕೊಂಡಿದ್ದರು.

ಬನ್ಸಾಲ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಎರಡು ತಿಂಗಳ ಹಿಂದಷ್ಟೇ ಬನ್ಸಾಲ್ ಅವರ ಪತ್ನಿ ಸತ್ಯಬಾಲಾ ಮತ್ತು ಮಗಳು ನೇಹಾ ಪೂರ್ವ ದೆಹಲಿಯ ನೀಲಕಂಠ ಅಪಾರ್ಟ್ ಮೆಂಟ್ ವೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಜೈಲಿನಲ್ಲಿದ್ದಾಗ ಸಿಬಿಐನ ಇಬ್ಬರು ಮಹಿಳಾ ಅಧಿಕಾರಿಗಳು ನನ್ನ ಪತ್ನಿ ಹಾಗೂ ಮಗಳ ಕೆನ್ನೆಗೆ ಹೊಡೆದಿದ್ದರು. ನಿನ್ನ ಪತಿ ಹಾಗೂ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ನಾಯಿಗಳಿಗೆ ತಿನ್ನಿಸುತ್ತೇವೆಂದು ಹೇಳಿದ್ದರು. ನನ್ನ ಪತ್ನಿಗೆ ಕಿರುಕುಳ ನೀಡಬೇಡಿ ಎಂದು ಹಿರಿಯ ಅಧಿಕಾರಿಗೆ ಮನವಿ ಮಾಡಿದೆ. ಈ ವೇಳೆ ಕಿರುಕುಳ ನೀಡದಿದ್ದರೆ, ನಾನು ಅಧಿಕಾರಿಯಾಗಲು ಸಾಧ್ಯವಿಲ್ಲ. ನಾನು ಆಡಳಿತಾರೂಢ ಪಕ್ಷದ ರಾಜಕೀಯ ಗಣ್ಯರೊಂದಿಗೆ ಸಂಪರ್ಕವನ್ನು ಹೊಂದಿದ್ದು, ಏನನ್ನು ಬೇಕಾದರೂ ಮಾಡಬಲ್ಲೆ ಎಂದು ಬೆದರಿಕೆ ಹಾಕಿದರು ಎಂದು ಬನ್ಸಾಲ್ ಡೆತ್ ನೋಟ್ ನಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಮೂವರು ಅಧಿಕಾರಿಗಳ ಹೆಸರನ್ನೂ ಸೂಚಿಸಿದ್ದರು ಎಂದು ಹೇಳಲಾಗುತ್ತಿತ್ತು. 

SCROLL FOR NEXT