ನವದೆಹಲಿ: ಬಿಜೆಪಿ ಹಿರಿಯ ನಾಯಕ ಸುಂದರ್ ಲಾಲ್ ಪಟ್ವಾ ಅವರು ನಿಧನರಾಗಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ.
ಸುಂದರ್ ಲಾಲ್ ಪಟ್ವಾ ಅವರ ನಿಧನ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಮೋದಿಯವರು, ಬಿಜೆಪಿಗಾಗಿ ಪಟ್ವಾ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟದ್ದರು. ಬಿಜೆಪಿಗೆ ಶಕ್ತಿಯುತ ನಾಯಕರಾಗಿದ್ದರು. ಉತ್ತಮ ಕೆಲಸ ಮಾಡುವುದರಲ್ಲಿ ಶ್ರಮ ಜೀವಿಯಾಗಿದ್ದ ಪಟ್ವಾ ಅವರ ನೆನೆಪು ಸದಾಕಾಲ ನಮ್ಮೊಂದಿರುತ್ತದೆ. ಪಟ್ವಾ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪಟ್ವಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಪಟ್ವಾ ಅವರು ಹೃದಯಾಘಾತದಿಂದಾಗಿ ಇಂದು ನಿಧನ ಹೊಂದಿದ್ದರು.