ಶ್ರೀನಗರ: ಪ್ರಮುಖ ಬೆಳವಣಿಗೆಯೊಂದರಲ್ಲಿ ಪ್ರತ್ಯೇಕವಾದಿ ನಾಯಕ ಮಸರತ್ ಅಲಂ ಭಟ್ ತಕ್ಷಣ ಬಿಡುಗಡೆ ಮಾಡುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಮೆಹಬೂಬಾ ಮುಫ್ತಿ ಸರ್ಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕ ಸುರಕ್ಷಾ ಕಾಯ್ದೆ(ಪಿಎಸ್ಎ)ಯಡಿ ಮಸರತ್ ಅಲಂನನ್ನು ಬಂಧಿಸಿತ್ತು. ಆದರೆ ಹೈಕೋರ್ಟ್ ಅಲಂ ವಿರುದ್ಧದ ಪಿಎಸ್ಎ ಕಾಯ್ದೆಯನ್ನೇ ರದ್ದುಗೊಳಿಸಿದ್ದು, ಪ್ರತ್ಯೇಕವಾದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿ ಆಪ್ತನಾಗಿರುವ ಮಸರತ್ ಅಲಂ ಸದ್ಯ ಜಮ್ಮುವಿನ ಕತುವಾ ಜೈಲಿನಲ್ಲಿದ್ದಾನೆ.
ಶ್ರೀನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಸರತ್ ಅಲಂ, ಪಾಕಿಸ್ತಾನದ ದ್ವಜ ಹಾರಿಸಿ ವಿವಾದಕ್ಕೀಡಾಗುವುದರ ಜತೆಗೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಜುಗರಕ್ಕೀಡಾಗಿತ್ತಲ್ಲದೇ ಈ ಬಗ್ಗೆ ವರದಿ ನೀಡುವುದರ ಜತೆಗೆ ಅಲಂ ನನ್ನು ಜೈಲಿಗಟ್ಟುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಮಸರತ್ ಅಲಂನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics