ನವದೆಹಲಿ: ನೋಟು ನಿಷೇಧದ ಬಳಿಕ ದೇಶದಲ್ಲಿ ನೇರ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಜೇಟ್ಲಿ ಅವರು, ನೋಟು ನಿಷೇಧದ ಕ್ರಮವನ್ನು ಬೆಂಬಲಿಸಿದ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನೋಟು ನಿಷೇಧದ ಕ್ರಮವನ್ನು ಜನತೆ ಶಾಂತ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಅವರಿಗೆ ಧನ್ಯವಾದಗಳು. ಇನ್ನು ನೋಟು ನಿಷೇಧದ ನಂತರ ದೇಶದಲ್ಲಿ ನೇರ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ. ನೇರ ತೆರಿಗೆ ಪಾವತಿ ಶೇಖಡ 13.6ರಷ್ಟು ಹೆಚ್ಚಳವಾಗಿದೆ.
ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ನಲ್ಲಿದ್ದ ನೋಟುಗಳೆಲ್ಲಾ ಚಲಾವಣೆಗೆ ಬಂದಿದೆ. ಬಹುತೇಕ ಹಳೇ ನೋಟುಗಳಿಗೆ ಪರ್ಯಾಯವಾಗಿ ಹೊಸ ನೋಟು ಚಲಾವಣೆಯಾಗುತ್ತಿದೆ. ಅದರಲ್ಲೂ 500 ರುಪಾಯಿ ಮುಖಬೆಲೆಯ ಹೊಸ ನೋಟುಗಳ ಚಲಾವಣೆ ಹೆಚ್ಚಾಗಿದೆ. ಇನ್ನು ದೇಶದಲ್ಲಿ ನೋಟು ನಿಷೇಧ ಪರಿಣಾಮ ಈಗ ಕಣ್ಣಿಗೆ ಬೀಳುತ್ತಿದೆ ಎಂದರು.