ನವದೆಹಲಿ: ಸೀಟು ಕಾದಿರಿಸುವಿಕೆ ಪಟ್ಟಿ ಸಿದ್ಧವಾದ ನಂತರ ಉಳಿಯುವ ರೈಲ್ವೆ ಬರ್ತ್ ಗಳಿಗೆ ರೈಲ್ವೆ ಇಲಾಖೆ ಶೇ.10 ರಷ್ಟು ರಿಯಾಯಿತಿ ಘೋಷಿಸಿದೆ.
ಜ.1 ರಿಂದ ಈ ನಿಮಯ ಜಾರಿಗೆ ಬರಲಿದೆ. ಮೇಲ್/ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸೀಟು ಕಾದಿರಿಸುವಿಕೆ ಪಟ್ಟಿ ಸಿದ್ಧವಾದ ನಂತರವೂ ಹಲವು ಬರ್ತ್ (ಸೀಟುಗಳು) ಖಾಲಿ ಉಳಿಯುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ, ಖಾಲಿ ಉಳಿಯುವ ಸೀಟುಗಳಿಗೆ ಶೇ.10 ರಷ್ಟು ರಿಯಾಯಿತಿ ಘೋಷಿಸುವ ನಿರ್ಧಾರ ಕೈಗೊಂಡಿದೆ.
ಎಸಿ/ ಸ್ಲೀಪರ್ ಕೋಚ್ ಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಜ.1 ರಿಂದ 6 ತಿಂಗಳ ವರೆಗೆ ಜಾರಿಯಲ್ಲಿರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಸೂಪರ್ ಫಾಸ್ಟ್ ಹಾಗೂ ಕಾದಿರಿಸುವಿಕೆಗಾಗಿ ವಿಧಿಸಲಾಗುವ ಶುಲ್ಕ ರಿಯಾಯಿತಿ ನೀಡಲಾಗುವ ಸೀಟುಗಳಿಗೂ ಅನ್ವಯವಾಗಲಿದೆ.