ಜರ್ಮನಿ ಚಾನ್ಸಿಲರ್ ಏಂಜೆಲಾ ಮಾರ್ಕೆಲ್
ಬರ್ಲಿನ್: ಇಸ್ಲಾಮಿಕ್ ಭಯೋತ್ಪಾದನೆ ಜರ್ಮನಿ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎಂದು ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಹೇಳಿದ್ದಾರೆ.
ಹೊಸ ವರ್ಶದ ಶುಭಾಶಯ ಸಂದೇಶದ ಭಾಷಣದಲ್ಲಿ ಎಂಜೆಲಾ ಮಾರ್ಕೆಲ್ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿದ್ದು, ಜರ್ಮನಿ ಸದ್ಯಕ್ಕೆ ಎದುರಿಸುತ್ತಿರುವ ಅತಿ ದೊಡ್ದ ಸವಾಲೆಂದರೆ ಅದು ಇಸ್ಲಾಮಿಕ್ ಭಯೋತ್ಪಾದನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಡಿ.19 ರಂದು ಬರ್ಲಿನ್ ನ ಕ್ರಿಸ್ ಮಸ್ ಮಾರ್ಕೆಟ್ ನ್ನು ಗುರಿಯಾಗಿರಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಮಾತನಾಡಿರುವ ಎಂಜೆಲಾ ಮಾರ್ಕೆಲ್, ರಕ್ಷಣೆ ಕೋರಿದವರೇ ಭಯೋತ್ಪಾದಕ ದಾಳಿ ನಡೆಸಿರುವುದು ಸಹನೆಯನ್ನು ಬೇಸರ ಮೂಡಿಸುತ್ತಿದೆ ಎಂದು ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ.
ಇಸ್ಲಾಮಿಕ್ ಭಯೋತ್ಪಾದಕರು ದ್ವೇಷವನ್ನೇ ಒಡಲಲ್ಲಿಟ್ಟುಕೊಂಡಿರುವ ಹಂತಕರು, ನಾವು ಹೇಗೆ ಬದುಕಬೇಕು ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ. ನಾವು ಮುಕ್ತವಾದ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಎಂದು ಮಾರ್ಕೆಲ್ ತಿಳಿಸಿದ್ದು, ಇಸ್ಲಾಮಿಕ್ ಭಯೋತ್ಪಾದನೆಯನ್ನು ಜರ್ಮನಿ ಯಶಸ್ವಿಯಾಗಿ ಹತ್ತಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.